

ರಾಣೆಬೆನ್ನೂರ: ಶಿಕ್ಷಕ ನಿರಂತರ ಅಧ್ಯಯನ ಶೀಲ, ಜ್ಞಾನದ ಋಣಿಯಾಗಿ ಹಾಗೂ ತಪಸ್ವಿಯಂತೆ ಶಿಕ್ಷಣ ಪಡೆದು ಸಮಾಜ ಸೇವೆಗೆ ಮುಂದಾಗಬೇಕು. ಸಾಮಾಜಿಕ ಸಾಮರಸ್ಯದ ಜತೆಗೆ ತನಗಾಗಿ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯವನ್ನು ಹೊಂದಿ ಆದರ್ಶ ಶಿಕ್ಷಕರಾಗಬೇಕು ಎಂದು ಬಿಇಒ ಶ್ಯಾಮಸುಂದರ ಅಡಿಗ ಹೇಳಿದರು.
ನಗರದ ಬಿಎಜೆಎಸ್ಎಸ್ ಬಿ.ಇಡಿ ಕಾಲೇಜ್ನಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕ ವಿದ್ಯಾಥಿರ್ ಸಂಘದ ಸಮಾರೋಪ ಹಾಗೂ ದೀಪದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಡಾ. ಎಚ್. ಓಂಕಾರನಾಯ್ಕ ಮಾತನಾಡಿ, ಉತ್ತಮ ಶಿಕ್ಷಕ ಭರವಸೆಯ ಪ್ರೇರಕರಾಗಿದ್ದು ಮುಂದಿನ ಪೀಳಿಗೆಯ ನಿಮಾರ್ತೃಗಳಾಗಿರುವುದರಿಂದ ಶಿಕ್ಷಕರು ಪರಿರ್ಪೂಣ ಜ್ಞಾನ ಹೊಂದುವುದರ ಜೊತೆಗೆ ಅತ್ಯುತ್ತಮ ಸಂವಹನ ಕೌಶಲ್ಯವನ್ನು ಒಳಗೊಂಡು ಆದರ್ಶ ಸಮಾಜ ನಿಮಿರ್ಸುವ ದೃಢ ಸಂಕಲ್ಪದೊಂದಿಗೆ ಬೌದ್ಧಿಕ ಪ್ರಾಮಾಣಿಕತೆ ಹಾಗೂ ನಿರಂತರ ಜ್ನಾನದಾಹಿಯಾಗಿ ಹೊಸ ಚಿಂತನೆಗಳನ್ನು ಹೊಂದಬೇಕು ಎಂದರು.
ಪ್ರಾಚಾರ್ಯ ಡಾ. ಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.
ಶೈಕ್ಷಣಿಕ ಸಲಹೆಗಾರ ಎಚ್.ಎ. ಭಿಕ್ಷಾವತಿರ್ಮಠ, ಉಪಪ್ರಾಚಾರ್ಯ ಶಿವಕುಮಾರ ಬಿಸಲಳ್ಳಿ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪರಶುರಾಮ ಪವಾರ, ಉಪನ್ಯಾಸಕರಾದ ಎ. ಶಂಕರನಾಯ್ಕ, ಡಾ. ಎಚ್.ಐ. ಬ್ಯಾಡಗಿ, ಶ್ರೀಕಾಂತ ಗೌಡಶಿವಣ್ಣನವರ, ಡಾ. ರಾಜೀವ ಕೆ.ಎಂ., ಅಶೋಕ ಬಣಕಾರ, ಮುತ್ತುರಾಜ ಸಿದ್ದಣ್ಣನವರ, ಶಿಕ್ಷಕ- ವಿದ್ಯಾಥಿರ್ ಸಂಘದ ಪ್ರಧಾನ ಕಾರ್ಯದಶಿರ್ ಬೀರಪ್ಪ ಲಮಾಣಿ, ಚಂದನ ಕಿಚಡಿ ಮತ್ತಿತರರಿದ್ದರು.