

ಮುಂಬೈ: ಮುಂಬೈನ ರಸ್ತೆಯಲ್ಲಿ ಸುಮಾರು 5 ಕೋಟಿ ಮೌಲ್ಯದ ಲಂಬೋರ್ಗಿನಿ ಕಾರು ಬೆಂಕಿಗಾಹುತಿಯಾಗಿದೆ. ಸ್ವಲ್ಪ ಸಮಯದಲ್ಲೇ ಇಡೀ ಕಾರು ಸುಟ್ಟು ಭಸ್ಮವಾಯಿತು. ಈ ವಿಡಿಯೋ ( Video Viral ) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬುಧವಾರ (ಡಿಸೆಂಬರ್ 25) ರಾತ್ರಿ 10:20ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಉದ್ಯಮಿ ಗೌತಮ್ ಸಿಂಘಾನಿಯಾ ಇದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡ ನಂತರ ಘಟನೆಯ ವೀಡಿಯೊ ವೈರಲ್ ಆಗಿದೆ.
ಮುಂಬೈನ ಬೀದಿಗಳಲ್ಲಿ ಚಲಿಸುವಾಗ ರೂ. ಕೋಟ್ಯಂತರ ಮೌಲ್ಯದ ಲಂಬೋರ್ಗಿನಿ ಕಾರು ಬೆಂಕಿಗೆ ಆಹುತಿಯಾಗಿದೆ. ರಾತ್ರಿ ನಡೆದ ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸುಮಾರು 45 ನಿಮಿಷಗಳಲ್ಲಿ ಬೆಂಕಿಯನ್ನು ಹತೋಟಿಗೆ ತಂದರು. ಸ್ಪೋರ್ಟ್ಸ್ ಕಾರಿನಲ್ಲಿರುವವರು ಮತ್ತು ಅದರ ಮಾಲೀಕರ ಬಗ್ಗೆ ವಿವರಗಳು ತಿಳುದು ಬಂದಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ತನಿಖೆ ಮುಂದುವರಿಯಲಿದೆ. ಗುಜರಾತ್ ನೋಂದಣಿ ಸಂಖ್ಯೆ ಹೊಂದಿರುವ ಕಿತ್ತಳೆ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
ರೇಮಂಡ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ, ಗೌತಮ್ ಸಿಂಘಾನಿಯಾ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮುಂಬೈನ ರಸ್ತೆಯಲ್ಲಿ ಲಂಬೋರ್ಗಿನಿಗೆ ಬೆಂಕಿ ಹತ್ತಿಕೊಂಡಿತು. ಈ ರೀತಿಯ ಘಟನೆಗಳು ಲಂಬೋರ್ಘಿನಿಯ ವಿಶ್ವಾಸಾರ್ಹತೆ ಮತ್ತು ಸುರಕ್ಷತಾ ಮಾನದಂಡಗಳ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತವೆ. ಬೆಲೆ, ಖ್ಯಾತಿ, ರಾಜಿಯಾಗದ ಗುಣಮಟ್ಟವನ್ನು ನಿರೀಕ್ಷಿಸಿ. ಅಪಘಾತಗಳನ್ನು ತಡೆಗಟ್ಟುವುದು ಉತ್ತಮ ಎಂದು ಅವರು ಬರೆದಿದ್ದಾರೆ