ಲಾಲು ಪ್ರಸಾದ್ ಕಿಡ್ನಿ ಸಮಸ್ಯೆ ತೀವ್ರ: ಶೇ. 25ರಷ್ಟು ಮಾತ್ರ ಕಾರ್ಯ

lalu prasad
Published on

ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್​ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಆರೋಗ್ಯ ಹದಗೆಡುತ್ತಿದೆ.

ಲಾಲು ಪ್ರಸಾದ್​ ಅವರ ಮೂತ್ರಪಿಂಡ (ಕಿಡ್ನಿ) ಶೇ. 25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ರಾಂಚಿಯ ರಿಮ್ಸ್​ ಆಸ್ಪತ್ರೆಯ ವೈದ್ಯರು ಶನಿವಾರ ತಿಳಿಸಿದೆ.

ಲಾಲು 20 ವರ್ಷದಿಂದ ಮಧುಮೇಹದಿಂದ ಬಳಲುತ್ತಿದ್ದಾರೆ. ಇದು ಅವರ ಅಂಗಗಳ ಮೇಲೆ ತೀವ್ರಗತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಯಾವಾಗ ಬೇಕಾದರೂ ಅವರ ಆರೋಗ್ಯ ಚಿಂತಾಜನಕವಾಗಬಹುದು ಎಂದಿದ್ದಾರೆ.

ಕ್ಷೀಣಿಸುತ್ತಿರುವ ಅಂಗಗಳ ಕ್ಷಮತೆಯನ್ನು ಯಾವ ಔಷಧದಿಂದಲೂ ಸರಿಪಡಿಸಲಾಗದ ಕಾರಣ ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಆದರೆ, ಈ ಕುರಿತ ನಿರ್ಧಾರವನ್ನು ಕೋರ್ಟ್ ಮತ್ತು ಸರ್ಕಾರ ಕೈಗೊಳ್ಳಬೇಕು ಎಂದು ಡಾ. ಉಮೇಶ್ ಪ್ರಸಾದ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net