ಲಾಲು ಪ್ರಸಾದ್ ಕಿಡ್ನಿ 25% ಮಾತ್ರ ಕೆಲಸ ಮಾಡ್ತಿದೆ: ರಿಮ್ಸ್ ಡಾಕ್ಟರ್​

lalu
Published on

ರಾಂಚಿ : ಬಿಹಾರದ ಮೇವು ಹಗರಣದಲ್ಲಿ ಶಿಕ್ಷೆಗೊಳಗಾಗಿರುವ ಆರ್​ಜೆಡಿ ನಾಯಕ ಲಾಲು ಪ್ರಸಾದ್ ಅವರ ಆರೋಗ್ಯಸ್ಥಿತಿ ದಿನೇದಿನೆ ಕ್ಷೀಣಿಸುತ್ತಿದೆಯೆ? ಹೌದು ಎನ್ನುತ್ತಿದ್ದಾರೆ ರಾಜೇಂದ್ರ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸಸ್​(ರಿಮ್ಸ್ )ನ ಡಾಕ್ಟರ್ ಉಮೇಶ್ ಪ್ರಸಾದ್. ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಡಾಕ್ಟರ್ ಹೇಳಿಕೆ ಮಹತ್ವ ಪಡೆದಿದೆ.

ಲಾಲು ಪ್ರಸಾದ್ ಅವರ ಕಿಡ್ನಿ ಸಮಸ್ಯೆ ಹೆಚ್ಚಾಗಿದ್ದು, ಶೇಕಡ 35 ಕೆಲಸ ಮಾಡುತ್ತಿದ್ದ ಎರಡೂ ಕಿಡ್ನಿಗಳ ಸಾಮರ್ಥ್ಯ ಈಗ ಶೇಕಡ 25ಕ್ಕೆ ಇಳಿದಿದೆ. ಹೀಗೆಯೇ ಮುಂದುವರಿದರೆ ಅವರು ಡಯಾಲಿಸಿಸ್​ಗೆ ಒಳಗಾಗಬೇಕಾಗಬಹುದು. ಕಿಡ್ನಿ ಸಮಸ್ಯೆ ಮೂರನೇ ಹಂತ ತಲುಪಿದ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ವರ್ಷಗಳಿಂದ ರಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್​ನಲ್ಲಿ ಅವರನ್ನು ರಿಮ್ಸ್ ನಿರ್ದೇಶಕರ ಬಂಗಲೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅವರು ಬಿಜೆಪಿ ಶಾಸಕರಿಗೆ ಫೋನ್ ಕರೆ ಮಾಡಿ ವಿವಾದ ಉಂಟುಮಾಡಿದ ಕಾರಣ ಮತ್ತೆ ಅವರನ್ನು ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಕಳೆದ ವಾರ ಸಿಬಿಐ ಕೂಡ ಜಾರ್ಖಂಡ್ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದು, ಲಾಲು ಪ್ರಸಾದ್ ಅವರಿಗೆ ಜೈಲಿನಲ್ಲೇ ಇನ್ನು ಚಿಕಿತ್ಸೆ ಮುಂದುವರಿಸಬಹುದು. ಆದ್ದರಿಂದ ಅವರನ್ನು ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವಂತೆ ಕೋರಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net