ಫೆ.5ಕ್ಕೆ ಲಕ್ಷ್ಮೀರಂಗನಾಥಸ್ವಾಮಿ ರಥೋತ್ಸವ

god
ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ
Published on

ಆನಂದಪುರ: ಗ್ರಾಮದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ಫೆ.5ರಂದು ಜರುಗಲಿರುವ ಮಹಾರಥೋತ್ಸವದ ಅಂಗವಾಗಿ ಫೆ.3ರಿಂದ 7ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 3ರಂದು ಸಂಜೆ 7ಕ್ಕೆ ಶೇಷವಾಹನೋತ್ಸವ, 4ರಂದು ಸಂಜೆ 6ಕ್ಕೆ ಗರುಡೋತ್ಸವ, ರಾಜಬೀದಿ ಮೆರವಣಿಗೆ, ಅಂದಾಸುರದ ಆದಿಶಕ್ತಿ ಮಹಿಳಾ ಮಂಡಳಿಯಿಂದ ಭಜನೆ ಸೇವೆ, 7.30ಕ್ಕೆ ಕಲ್ಯಾಣೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. 5ರಂದು ಬೆಳಗ್ಗೆ 9ಕ್ಕೆ ಗಜವಾಹನೋತ್ಸವ, 11.30ಕ್ಕೆ ಮಹಾ ಬ್ರಹ್ಮರಥೋತ್ಸವ, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಡೋಲೋತ್ಸವ, ಕೊರಲಿಕೊಪ್ಪದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯಿಂದ ಭಜನೆ ಸೇವೆ, ನಾಟ್ಯ ತರಂಗಿಣಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ, ಪ್ರಸಾದ ವಿತರಣೆ ನಡೆಯಲಿದೆ. 6ರಂದು ಬೆಳಗ್ಗೆ ಆಶ್ವವಾಹನೋತ್ಸವ, ಅವಭೃತ ಚಕ್ರಸ್ನಾನ, ಸಂಜೆ 6ಕ್ಕೆ ದಾಸಕೊಪ್ಪದ ಹರಿಹರೇಶ್ವರ ಭಜನಾ ಮಂಡಳಿಯಿಂದ ಭಜನೆ, ನಾಟ್ಯ ತರಂಗಿಣಿ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ, ಪ್ರಸಾದ ವಿನಿಯೋಗ ನಡೆಯಲಿದೆ. 7ರಂದು ಬೆಳಗ್ಗೆ 9ಕ್ಕೆ ಮಹಾಭಿಷೇಕ, ಸಂಜೆ 6.30ಕ್ಕೆ ಶಯನೋತ್ಸವ, ಸ್ಥಳೀಯ ಶ್ರೀ ವೀರಾಂಜನೇಯ ಭಜನಾ ಮಂಡಳಿ ಮತ್ತು ಶ್ರೀ ಮಾರಿಕಾಂಬಾ ಭಜನಾ ಮಂಡಳಿಯಿಂದ ಭಜನೆ ಸೇವೆ, ರಾತ್ರಿ 8.30ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net