‘ಲಕ್‌ಪತಿ ದೀದಿ’ ಯೋಜನೆ ಅನುದಾನ 3 ಕೋಟಿ ರೂ.ಗೆ ಹೆಚ್ಚಳ

Nirmala Sitharaman
Published on

ಬೆಂಗಳೂರು: ‘ಲಕ್‌ಪತಿ ದೀದಿ’ ಯೋಜನೆಯ ಅನುದಾನವನ್ನು ಎರಡು ಕೋಟಿ ರೂ.ನಿಂದ ಮೂರು ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

ಈ ಯೋಜನೆಯು ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳಲ್ಲಿ (ಎಸ್‌ಎಚ್‌ಜಿ) ತರಬೇತಿ ನೀಡುವ ಗುರಿ ಹೊಂದಿದ್ದು, ಇದರಿಂದ ವರ್ಷಕ್ಕೆ ಕನಿಷ್ಠ 1 ಲಕ್ಷ ರೂಪಾಯಿಗಳ ಸುಸ್ಥಿರ ಆದಾಯ ಗಳಿಸಬಹುದಾಗಿದೆ. ಒಂಬತ್ತು ಕೋಟಿ ಮಹಿಳೆಯರಿಂದ 83 ಲಕ್ಷ ಸ್ವ-ಸಹಾಯ ಗುಂಪುಗಳು ಸಬಲೀಕರಣ ಮತ್ತು ಸ್ವಾವಲಂಬನೆಯೊಂದಿಗೆ ಗ್ರಾಮೀಣ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಸಹಕಾರಿಯಾಗಲಿದೆ ಎನ್ನವುದು ಸರ್ಕಾರದ ಆಶಯ.

ಈ ಯೋಜನೆಯು ಈಗಾಗಲೆ ಒಂದು ಕೋಟಿ ಮಹಿಳೆಯರಿಗೆ ‘ಲಕ್‌ಪತಿ ದೀದಿ’ ಯಾಗಲು ನೆರವಾಗಿದ್ದು, ಅವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅಂತಹವರನ್ನು ಗೌರವಿಸುವ ಮೂಲಕ ಅವರ ಸಾಧನೆಗಳನ್ನು ಗುರುತಿಸಲಾಗುತ್ತದೆ. ಈ ಯೋಜನೆಯ ಯಶಸ್ಸಿನಿಂದ ಉತ್ತೇಜನಗೊಂಡು ‘ಲಕ್‌ಪತಿ ದೀದಿ’ಯ ಅನುದಾನದ ಗುರಿಯನ್ನು ಎರಡು ಕೋಟಿ ರೂ.ನಿಂದ ಮೂರು ಕೋಟಿ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net