

ರಾಣೆಬೆನ್ನೂರ: ಇಂದಿನ ದಿನದಲ್ಲಿ ನೀರು ಸಂರಕ್ಷಣೆ ಬಹಳಷ್ಟು ಅವಶ್ಯವಿದೆ. ಆದರೆ, ನಗರ ಪ್ರದೇಶಗಳಲ್ಲಿ ನಗರೀಕರಣದ ಹೆಸರಿನಲ್ಲಿ ದಿನದಿಂದ ದಿನಕ್ಕೆ ಕೆರೆ, ಬಾವಿಗಳು ಮಾಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಇಡೀ ಭೂಮಿ ನೀರಿನಿಂದ ಆವೃತವಾಗಿದೆ ಎಂಬುದೆನೋ ನಿಜ, ಆದರೆ ನಮ್ಮ ನಗರದಲ್ಲಿ ಮೊದಲು ಇದ್ದ ಕೆರೆ, ಕೊಳವೆ ಬಾವಿಗಳು ನಗರೀಕರಣದಿಂದ ಮಾಯವಾಗಿವೆ. ಆದ್ದರಿಂದ ಪ್ರಾರಂಭದಲ್ಲಿ ಸಾಕಷ್ಟು ತೊಂದರೆಯಾಗುತ್ತಿತ್ತು. ಆದರೆ ಈಗ ಜೀವಜಲ ಮಿಷನ್ ಯೋಜನೆಯ ಮೂಲಕ 24/7 ನೀರು ಸರಬರಾಜು ಆಗುತ್ತಿರುವುದರಿಂದ ನಮ್ಮ ನೀರಿನ ಸಮಸ್ಯೆ ಮಾಯವಾಗಿದೆ. ಎಲ್ಲರೂ ನೀರನ್ನು ಮಿತವಾಗಿ ಬಳಸಿ ಅಂತರಜಲವನ್ನು ಕಾಪಾಡೋಣ ಎಂದರು.
24*7 ಕುಡಿಯುವ ನೀರಿನ ಸರಬರಾಜು ವಿಭಾಗದ ಎಇಇ ಎಸ್.ಬಿ. ಹಾದಿಮನಿ ನೀರು ಸಂರಕ್ಷಣೆ ಕುರಿತು ಉಪನ್ಯಾಸ ನೀಡಿ, ಜಗತ್ತಿನ ಸುಮಾರು 783 ದಶಲಕ್ಷದಷ್ಟು ಜನರಿಗೆ ಈಗಲೂ ನೀರು ಸಿಗುತ್ತಿಲ್ಲ. ಕೇವಲ 2.5 ದಶಲಕ್ಷ ಜನರಿಗೆ ಮಾತ್ರ ನೀರಿನ ಲಭ್ಯತೆಯಿದೆ. ಆದ್ದರಿಂದ ನೀರು ಸಂರಕ್ಷಣೆ ಬಹಳ ಮುಖ್ಯವಾಗಿದೆ ಎಂದರು.
ಪ್ರಾಚಾರ್ಯ ನಾರಾಯಣ ನಾಯಕ, ಉಪನ್ಯಾಸಕರಾದ ಕೃಷ್ಣ ಎಲ್.ಎಚ್., ವಾಣಿಶ್ರೀ ಪಾಟೀಲ, ರೇಖಾ ಶಿಡೇನೂರ, ಸಾಯಿಲತಾ ಮಡಿವಾಳರ, ಶಶಿಕಲಾ ಅಕ್ಕಸಾಲಿಗ, ತೇಜಶ್ವಿನಿ ಕುರುವತ್ತಿ, ನಿಸರ್ಗ ಉದಪ್ಪನವರ, ಪ್ರತಿಭಾ ತೋಟದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.