ಕೊಡಕಣಿ ಗ್ರಾಮದಲ್ಲಿ ಕೆರೆಬೇಟೆ

kere
ಕೊಡಕಣಿ ಗ್ರಾಮದ ಹಳ್ಳಿಕೆರೆಯಲ್ಲಿ ಮೀನು ಬೇಟೆ ಸಂಭ್ರಮ.
Published on

ಸೊರಬ: ಪುರಸಭೆ ವ್ಯಾಪ್ತಿಯ ಕೊಡಕಣಿ ಗ್ರಾಮದ ಹಳ್ಳಿಕೆರೆಯಲ್ಲಿ ಮಂಗಳವಾರ ಮೀನು ಬೇಟೆ ನಡೆಯಿತು. ಗ್ರಾಮದ ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು. ಜನರು ಏಕ ಕಾಲದಲ್ಲಿ ಕೆರೆಗೆ ಇಳಿದು ಮೀನುಗಳನ್ನು ಹಿಡಿಯುವುದನ್ನು ನೋಡಲು ನೂರಾರು ಜನ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಕೆರೆಬೇಟೆಯಲ್ಲಿ ಕೂಣಿ, ಜರಡಿ ಬಲೆ ಬಳಸಿ ಗ್ರಾಮಸ್ಥರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕೆಲವರಿಗೆ 5 ಕೆ.ಜಿ.ವರೆಗೆ ಮೀನು ಲಭಿಸಿದರೆ, ಕೆಲವರು ಚಿಕ್ಕ ಮೀನುಗಳನ್ನು ಹಿಡಿದು ತೃಪ್ತಿಪಟ್ಟುಕೊಂಡರು. ಬಿದರಿನ ಕೂಣಿಗೆ ಬದಲಾಗಿ ಕಬ್ಬಿಣದ ಕೂಣಿಗಳನ್ನು ಬಳಸಲಾಯಿತು. ಗ್ರಾಮ ಸಮಿತಿಯು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net