ಪದವೀಧರರಿಗೆ ಕಾಡುತ್ತಿದೆ ಕೌಶಲದ ಕೊರತೆ

nes
ಎನ್​ಇಎಸ್​ ಇನ್ಸಿಟಿಟ್ಯೂಟ್​ ಆ್​ ಅಡ್ವಾನ್ಸಡ್​ ಸ್ಟಡಿಸ್​ನಿಂದ ಏರ್ಪಡಿಸಿದ್ದ ಓರಿಯೆಂಟೇಷನ್​ ಕಾರ್ಯಕ್ರಮವನ್ನು ಡಾ. ಕೆ.ನಾಗರಾಜ್​ ಉದ್ಘಾಟಿಸಿದರು. ಡಾ. ವಿಎಲ್​ಎಸ್​ ಕುಮಾರ್​, ಎಸ್​.ಎನ್​.ನಾಗರಾಜ, ಡಾ. ಬಿ.ಎಸ್​.ಶಿವಪ್ರಸಾದ್​, ಟಿ.ಆರ್​.ಅಶ್ವತ್ಥನಾರಾಯಣ ಶೆಟ್ಟಿ ಇದ್ದರು.
Published on

ಶಿವಮೊಗ್ಗ: ಇಂದು ಪದವೀಧರರಲ್ಲಿ ಕೌಶಲದ ಕೊರತೆ ಇದೆ. ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೌಶಲ ಅಗತ್ಯ ಎಂದು ಪ್ರಕೃತಿ ವಿಕೋಪ ಅಧ್ಯಯನ ತಜ್ಞ ಡಾ. ವಿಎಲ್​ಎಸ್​ ಕುಮಾರ್​ ಹೇಳಿದರು.

ಎನ್​ಇಎಸ್​ ಇನ್​ಸ್ಟಿಟ್ಯೂಟ್​ ಆ್​ ಅಡ್ವಾನ್ಸಡ್​ ಸ್ಟಡಿಸ್​ನಿಂದ ಸೋಮವಾರ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಷನ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಉಂಟಾಗುತ್ತಿರುವ ತಾಂತ್ರಿಕ ಬದಲಾವಣೆಗಳ ಬಗ್ಗೆ ಎಚ್ಚರಿಕೆ ಅವಶ್ಯ ಎಂದರು.
ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು ಯುವ ಸಮೂಹವನ್ನು ಜ್ಞಾನದಿಂದ ಹಿಂದಕ್ಕೆ ಕೊಂಡೊಯ್ಯುತ್ತಿವೆ. ಸಮಯದ ನಿರ್ವಹಣೆ, ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಥಿತಿಯಿಂದ ಉತ್ತಮ ಗುರಿಯೆಡೆಗೆ ಸಾಗುವುದು ಸಾಧ್ಯ. ಕಾಲೇಜು ದಿನಗಳಲ್ಲಿ ಕೆಟ್ಟ ಅಭ್ಯಾಸಗಳು ಆರಂಭವಾಗುವ ಎಲ್ಲ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಕೆ.ನಾಗರಾಜ್​, ಪ್ರತಿ ದಿನವೂ ವಿದ್ಯಾರ್ಥಿಗಳಿಂದ ಹೊಸತನ್ನು ಕಲಿಯುವ ಅವಕಾಶ ಉಪನ್ಯಾಸಕರಿಗಿದೆ ಎಂದು ಅಭಿಪ್ರಾಯಪಟ್ಟರು.
ಎನ್​ಇಎಸ್​ ಕಾರ್ಯದರ್ಶಿ ಎಸ್​.ಎನ್​.ನಾಗರಾಜ, ನಿರ್ದೇಶಕ ಟಿ.ಆರ್​.ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಚಾರ್ಯ ಡಾ.ಬಿ.ಎಸ್​.ಶಿವಪ್ರಸಾಸ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net