

ಶೃಂಗೇರಿ: ಸಂಸ್ಕೃತ ಜಗತ್ತಿನ ಎಲ್ಲ ವಿಷಯ ಹಾಗೂ ಸಂಗತಿ ಒಳಗೊಂಡ ಶ್ರೀಮಂತ ಭಾಷೆ. ಎಲ್ಲ ಭಾಷೆಯ ಮೂಲಬೇರು. ಜನಸಾಮಾನ್ಯರಿಗೆ ಸಂಸ್ಕೃತದ ಅರಿವನ್ನು ಮೂಡಿಸಬೇಕಿದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ನರಸಿಂಹವನದ ಗುರುನಿವಾಸದಲ್ಲಿ ಶುಕ್ರವಾರ ಮೆಣಸೆ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಶುದ್ಧ ಹಾಗೂ ದೇವಭಾಷೆಯಾಗಿದೆ. ಆದರೆ ಪ್ರೋತ್ಸಾಹ ಕೊರತೆಯಿಂದ ಭಾಷೆಯ ಬೆಳವಣಿಗೆ ಕುಂಠಿತಗೊಂಡಿದೆ. ಮೆಣಸೆ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಕೃತ ಭಾಷೆ ಬೆಳವಣಿಗೆಗೆ ಉನ್ನತ ಕೊಡುಗೆ ನೀಡುತ್ತಿದೆ. ಸಾರ್ವಜನಿಕರಿಗೆ ಸಂಸ್ಕೃತದ ಅರಿವು ಮೂಡಿಸಬೇಕಿದೆ ಎಂದರು.
ಭಾಷೆಗಳಲ್ಲಿ ಅತಿಮುಖ್ಯ ಹಾಗೂ ಮಧುರ ಭಾಷೆ ಸಂಸ್ಕೃತ. ಪ್ರಾಚೀನ ಗ್ರಂಥಗಳು ಸಂಸ್ಕೃತದಲ್ಲಿದ್ದು ನಮ್ಮ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಸಾರುವಲ್ಲಿ ಈ ಭಾಷೆ ಉನ್ನತ ಕೊಡುಗೆ ನೀಡಿದೆ ಎಂದರು.
ವಿಜಯವಾಣಿ ಸುದ್ಧಿಜಾಲ,ಶೃಂಗೇರಿ;-ಆಡುಭಾಷೆಯಾಗಿ ಸಂಸ್ಕೃತ ಬಳಸುವುದರಿಂದ ಭಾಷೆ ಬೆಳೆಯಲು ಸಾಧ್ಯ.ಈ ಭಾಷೆ ಅತ್ಯಂತ ಕ್ಷಿಷ್ಟಕರ ಎಂಬ ಮನೋಭಾವ ಎಲ್ಲರಲ್ಲೂ ಇದೆ.ಆದರೆ ಸಂಸ್ಕೃತಭಾಷೆ ಅತಿ ಸರಳವಾದ ಭಾಷೆ.ಶೃಂಗೇರಿಯನ್ನು ಸಂಸ್ಕೃತ ಗ್ರಾಮವಾಗಿಸಲು ಸರ್ವರೂ ಒಗ್ಗೂಡಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಐದು ಸಾವಿರ ವರ್ಷದಿಂದ ನಿರಂತರವಾಗಿ ಹರಿಯುತ್ತಿರುವ ಭಾಷೆ ದೇಶದ ಹಲೇಭಾಷೆಯಾಗಿದೆ.ವೇದಗಳು ಸಂಸ್ಕೃತವನ್ನು ಮೊದಲು ಬಳಸಿಕೊಂಡಿವೆ.ಈ ಬಾಷೆಯನ್ನು ಎಲ್ಲಾ ಭಾಷೆಯ ತಾಯಿ ಎಂದು ಪರಿಗಣಿಸಲಾಗುತ್ತದೆ.ಅಂಗ್ಲಭಾಷೆಯ ಹಲವಾರು ಪದಗಳನ್ನು ಸಂಸ್ಕೃತಭಾಷೆಯಿಂದ ತೆಗೆದುಕೊಳ್ಳಲಾಗಿದೆ.
ಸಂಸ್ಕೃತ ಪಟ್ಟಣವಾಗಲಿ ಶೃಂಗೇರಿ: ಆಡುಭಾಷೆಯಾಗಿ ಸಂಸ್ಕೃತ ಬಳಸುವುದರಿಂದ ಭಾಷೆ ಬೆಳೆಯಲು ಸಾಧ್ಯ. ಈ ಭಾಷೆ ಕ್ಷಿಷ್ಟಕರ ಎಂಬ ಮನೋಭಾವ ಹಲವರಲ್ಲಿದೆ. ಸಂಸ್ಕೃತ ಅತಿ ಸರಳ ಭಾಷೆ. ಶೃಂಗೇರಿಯನ್ನು ಸಂಸ್ಕೃತ ಪಟ್ಟಣವಾಗಿಸಲು ಸರ್ವರೂ ಒಗ್ಗೂಡಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕರೆ ನೀಡಿದರು. ಸಂಸ್ಕೃತಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ವೇದಗಳು ಸಂಸ್ಕೃತವನ್ನು ಮೊದಲು ಬಳಸಿಕೊಂಡಿವೆ. ಎಲ್ಲ ಭಾಷೆಯ ತಾಯಿ ಎಂದು ಪರಿಗಣಿಸಲಾಗುತ್ತದೆ. ಅಂಗ್ಲಭಾಷೆಯ ಹಲವಾರು ಪದಗಳನ್ನು ಸಂಸ್ಕೃತದಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸ್ಕೃತೋತ್ಸವ ಸಲುವಾಗಿ ಪಟ್ಟಣದಲ್ಲಿ ಶೋಭಾಯಾತ್ರೆ, ಬೀದಿನಾಟಕ ಪ್ರದರ್ಶನ ನಡೆಯಿತು. ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ. ಸಿ.ಎಸ್.ಎಸ್.ಎನ್.ಮೂರ್ತಿ, ಪ್ರಾಧ್ಯಾಪಕರಾದ ಪ್ರೊ. ನವೀನ್ ಹೊಳ್ಳ, ಡಾ. ಪದ್ಮನಾಭ ಇದ್ದರು.