ಎರಡು ದಿನ ಶಿವಮೊಗ್ಗದಲ್ಲಿ ಲೇಬರ್ ಕಾರ್ಡ್ ವಿತರಣೆ

satish
ಎಚ್.ಸತೀಶ್, ವೇದಿಕೆ ಸಂಸ್ಥಾಪಕ
Published on

ಶಿವಮೊಗ್ಗ: ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಜಿಲ್ಲಾ ಚಾಲಕರ ಮತ್ತು ಕಾರ್ಮಿಕರ ಘಟಕದಿಂದ ಡಿ.5 ಮತ್ತು 6ರಂದು ಬೆಳಗ್ಗೆ 10.30ರಿಂದ ಸಂಜೆ 6ರವರೆಗೆ ದುರ್ಗಿಗುಡಿ 2ನೇ ತಿರುವಿನಲ್ಲಿರುವ ಕಚೇರಿಯಲ್ಲಿ ಉಚಿತವಾಗಿ ಚಾಲಕರ ಲೇಬರ್ ಕಾರ್ಡ್ ವಿತರಿಸಲಾಗುತ್ತದೆ ಎಂದು ವೇದಿಕೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಚ್.ಸತೀಶ್(ದೇವು) ತಿಳಿಸಿದರು.

ಚಾಲಕರಿಗೆ ಲೇಬರ್ ಕಾರ್ಡ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಇತ್ತೀಚೆಗೆ ಚಾಲಕ ಹಾಗೂ ಕಾರ್ಮಿಕರ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾಸ್‌ಪೋರ್ಟ್ ಸೈಜ್ ಫೋಟೊ ನೀಡಿ ಲೇಬರ್ ಕಾರ್ಡ್ ಪಡೆಯಬಹುದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಂದರು.

ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು, ನಿಲ್ದಾಣ ಸಿಬ್ಬಂದಿ, ಬುಕಿಂಗ್ ಗುಮಾಸ್ತರು, ಡಿಪೋ ಗುಮಾಸ್ತರು, ಮೋಟಾರ್ ಗ್ಯಾರೇಜ್, ನಿಲ್ದಾಣದ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಸಿಬ್ಬಂದಿ, ಟೈರ್ ಜೋಡಿಸುವ ಸಿಬ್ಬಂದಿ ಕಾರ್ಡ್ ಪಡೆಯಬಹುದು. ಎಲ್ಲ ದಾಖಲೆಗಳು ಸರಿ ಇದ್ದರೆ ಮಾತ್ರ ಕಾರ್ಡ್ ನೀಡಲಾಗುವುದು ಎಂದು ಹೇಳಿದರು.

ಪ್ರಮುಖರಾದ ಸಂತೋಷ್, ಬಿ.ಕೆ.ಸತೀಶ್, ಜಿ.ಉಮೇಶ್, ರಾಜು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net