ಕೊಪ್ಪಳದಲ್ಲಿ ಮಾ.9ಕ್ಕೆ ಕೆಯುಡಬ್ಲೂಜೆ ಸರ್ವ ಸದಸ್ಯರ ಸಭೆ

Kuwj (1)
Published on

ಬೆಂಗಳೂರು:

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಸರ್ವ ಸದಸ್ಯರ ಮಹಾ ಸಭೆಯು ಕೊಪ್ಪಳದ ಬಸ್ ನಿಲ್ದಾಣ ಬಳಿ ಇರುವ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಮಾರ್ಚ್ 9ರಂದು 11 ಗಂಟೆಗೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಳೆದ ವರ್ಷ ಮಂಗಳೂರಿನಲ್ಲಿ ಸರ್ವ ಸದಸ್ಯರ ಸಭೆ ನಡೆದಿತ್ತು. ಈ ವರ್ಷ ಕೊಪ್ಪಳದಲ್ಲಿ ಅಲ್ಲಿನ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ವಾರ್ಷಿಕ ವರದಿ ಮತ್ತು ವಾಷಿರ್ಕ ಲೆಕ್ಕ ಪರಿಶೋದನಾ ವರದಿಗಳನ್ನು ಮಂಡನೆ ಮಾಡಲಾಗುವುದು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net