ಕುವೆಂಪು ಅವರಿಗೂ ನೊಬೆಲ್ ಸಿಗುತ್ತಿತ್ತು: ನಾಗತಿಹಳ್ಳಿ

nagatihalli
ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. ಡಾ.ಜೆ.ಕೆ.ರಮೇಶ್, ಮಧು ಬಂಗಾರಪ್ಪ, ಡಿ.ಮಂಜುನಾಥ್, ಡಾ.ಎಸ್.ಪಿ.ಪದ್ಮಪ್ರಸಾದ್, ಎಚ್.ಉಮೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಆದರೆ ಅದನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯವಾಗುತ್ತಿಲ್ಲ. ಒಂದು ವೇಳೆ ಈ ಪ್ರಕ್ರಿಯೆ ನಡೆದಿದ್ದರೆ ಕುವೆಂಪು ಅವರ ಸಾಹಿತ್ಯಕ್ಕೆ ಖಂಡಿತವಾಗಿಯೂ ನೊಬೆಲ್ ಪುರಸ್ಕಾರ ಸಿಗುತ್ತಿತ್ತು ಎಂದು ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯದ ಅನುವಾದ ಮಹತ್ತರವಾದುದು. ದೇಶದಲ್ಲಿ ಕೆಲವು ಭಾಷೆಗಳು ಜನ್ಮತಾಳುವ ಮುನ್ನವೇ 12ನೇ ಶತಮಾನದಲ್ಲೇ ಕನ್ನಡಲ್ಲಿ ಶರಣ ಸಾಹಿತ್ಯ ರಚನೆಯಾಗಿತ್ತು. ಆದರೆ ಅದನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಾವು ವಿಫಲರಾದೆವು ಎಂದರು.

ಕನ್ನಡ ಭಾಷೆಗೆ ಒಂದು ಮೌಖಿಕ ಪರಂಪರೆಯಿತ್ತು. ಹೇಳುವ, ಕೇಳುವ ಪರಂಪರೆಯಿತ್ತು. ಕೇಳು ಜನಮೇಜಯ ಎಂಬುದು ಕಾಲಾಂತರದಲ್ಲಿ ಓದು ಜನಮೇಜಯ ಎಂದು ಬದಲಾಯಿತು. ಈಗ ನೋಡು ಜನಮೇಜಯ ಎಂಬ ಸನ್ನಿವೇಶವಿದೆ. ಸಾಮಾಜಿಕ ಜಾಲತಾಣಗಳು ಕನ್ನಡಕ್ಕೆ ಸವಾಲಾಗಿದೆ. ಆದರೆ ಇದನ್ನು ಕನ್ನಡ ಸಾಹಿತ್ಯ ಬೆಳೆಸಲು ಬಳಸಿಕೊಂಡರೆ ಮಾತ್ರ ಪ್ರಯೋಜನ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net