ಕುವೆಂಪು ವಿವಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ

kuvempu university
Published on

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ಎನ್‌ಎಎಸಿ) ಎ ಗ್ರೇಡ್ ಮಾನ್ಯತೆ ನೀಡಿದೆ.

2018ರ ಅಕ್ಟೋಬರ್ ತಿಂಗಳಿನಿಂದ 2024ರ ಸೆಪ್ಟೆಂಬರ್‌ವರೆಗಿನ ಮೌಲ್ಯಮಾಪನ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳು ಮತ್ತು ಮೂಲಸೌಕರ್ಯಗಳಲ್ಲಿನ ಸುಧಾರಣೆಗಳನ್ನು ನ್ಯಾಕ್ ತಂಡ ಜೂನ್‌ನಲ್ಲಿ ಪರಿಶೀಲನೆ ನಡೆಸಿತ್ತು.

ಇದೀಗ ನ್ಯಾಕ್ ಸಂಸ್ಥೆ ಫಲಿತಾಂಶವನ್ನು ವಿಶ್ವವಿದ್ಯಾಲಯದೊಂದಿಗೆ ಹಂಚಿಕೊಂಡಿದ್ದು, 3.11 ಸಿಜಿಪಿಎ ಅಂಕಗಳೊಂದಿಗೆ ಕುವೆಂಪು ವಿವಿ ಎ ಶ್ರೇಣಿ ಮಾನ್ಯತೆ ಉಳಿಸಿಕೊಂಡಿದೆ. ಕಳೆದ ಮೌಲ್ಯಮಾಪನ ಅವಧಿಯಲ್ಲಿ 3.05 ಸಿಜಿಪಿಎನೊಂದಿಗೆ ಎ ಶ್ರೇಣಿ ಪಡೆದಿದ್ದ ವಿವಿ, ಈ ಬಾರಿ ಅಂಕ ಹೆಚ್ಚಿಸಿಕೊಂಡಿದ್ದು, 3.11 ಸಿಜಿಪಿಎ ಪಡೆಯುವುದರ ಮೂಲಕ ಮತ್ತೊಮ್ಮೆ ಎ ಶ್ರೇಣಿ ಗರಿ ಮುಡಿಗೇರಿಸಿಕೊಂಡಿದೆ.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಮೌಲ್ಯಮಾಪನದ ಅವಧಿಯಲ್ಲಿ ಕರೊನಾ ಮಹಾಮಾರಿ ಇದ್ದರೂ ಅಧ್ಯಾಪಕರ ಸಂಶೋಧನಾ ಚಟುವಟಿಕೆಗಳು, ನಿರಂತರವಾಗಿ ಮುಂದುವರಿದ ಪಾಠ ಪ್ರವಚನ, ಅಧ್ಯಾಪಕೇತರ ನೌಕರರ ಸಂಪೂರ್ಣ ಬೆಂಬಲ ಮತ್ತು ಆಂತರಿಕ ಗುಣಮಟ್ಟ ಮತ್ತು ಮೌಲ್ಯಮಾಪನ ಘಟಕ (ಐಕ್ಯೂಎಸಿ)ದ ಶ್ರಮದಿಂದ ಸಾಧನೆ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net