ಕುವೆಂಪು ಸಾತ್ವಿಕ ಪ್ರಜ್ಞೆಯ ಸಾಕಾರಮೂರ್ತಿ

sor kuvempu
ಸೊರಬದಲ್ಲಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ದಂತ ವೈದ್ಯ ಎಚ್.ಇ. ಜ್ಞಾನೇಶ್, ಷಣ್ಮುಖಾಚಾರ್, ಸುಜಾತಾ ಜೋತಾಡಿ, ಪಾಣಿ ರಾಜಪ್ಪ, ಸವಿತಾ ಭಟ್, ಮಾಲತೇಶ್ ಇತರರಿದ್ದರು.
Published on

ಸೊರಬ: ರಾಷ್ಟ್ರಕವಿ ಕುವೆಂಪು ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ, ವೈಚಾರಿಕ ಪ್ರಜ್ಞೆಯ ಒಳ ನೋಟಗಳು ಎದ್ದು ಕಾಣುತ್ತವೆ ಎಂದು ದಂತ ವೈದ್ಯ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ಪಟ್ಟಣದ ಜೈಮಾತಾ ಕ್ಲಿನಿಕ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಮತ್ತು ನೇಕಾರ ಪ್ರಕಾಶನದ ರಾಮಕೃಷ್ಣ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಕನ್ನಡ ಸಾಹಿತ್ಯದ ಸಾತ್ವಿಕ ಪ್ರಜ್ಞೆಯ ಸಾಕಾರಮೂರ್ತಿ. ಕನ್ನಡದ ಇಂಪು, ಕಂಪು, ತಂಪು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇವರ ಸಾಹಿತ್ಯವನ್ನು ಅರಿಯುವ ಅಗತ್ಯವಿದೆ. ಧಾರ್ಮಿಕ ಡಾಂಭಿಕತೆ ವಿಮರ್ಶೆ ಮಾಡಿ ಅಂತರಾಳದ ಆಧ್ಯಾತ್ಮಿಕವನ್ನು ರೂಢಿಸಿಕೊಳ್ಳಬೇಕು. ಅವರ ಸಾಹಿತ್ಯ, ಪ್ರಕೃತಿ ಸೌಂದರ್ಯ, ರಾಷ್ಟ್ರೀಯತೆ, ವೈಚಾರಿಕತೆಯ ಅವಲೋಕನವನ್ನು ಎಲ್ಲರೂ ಅರಿಯಬೇಕು ಎಂದರು.

ಕನ್ನಡ ಸಹಾಯಕ ಪ್ರಾಧ್ಯಾಪಕ ಭೀಮಪ್ಪ ಕುವೆಂಪು ಕುರಿತು ಉಪನ್ಯಾಸ ನೀಡಿದರು. ನೇಕಾರ ಪ್ರಕಾಶನದ ರಾಮಕೃಷ್ಣ ಅವರ ಕುರಿತು ಶ್ರೀಪಾದ ಬಿಚ್ಚುಗತ್ತಿ ಮತ್ತು ಚಿಂತಕ ರಾಜಪ್ಪ ಮಾಸ್ಟರ್ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಚಾರ್, ಸುಜಾತಾ ಜೋತಾಡಿ, ಪಾಣಿ ರಾಜಪ್ಪ, ಸವಿತಾ ಭಟ್, ಶಿಕ್ಷಕ ಮಾಲತೇಶ್, ರೇಣುಕಮ್ಮ ಗೌಳಿ, ವೀಣಾ ಇತರರಿದ್ದರು. ರೂಪಾ ಮಧುಕೇಶ್ವರ ಮತ್ತು ಆಕಾಶವಾಣಿ ಕಲಾವಿದ ಗುರುಮೂರ್ತಿ, ಮೋಹನ್ ಕುವೆಂಪು ಅವರ ಗೀತಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net