ರಸ್ತೆ ಅಭಿವೃದ್ಧಿ ವಿಚಾರವಾಗಿ ಕಾಂಗ್ರೆಸ್​ ಶಾಸಕಿಯ ಮುಂದೆಯೇ ಕಿತ್ತಾಡಿಕೊಂಡ ಕೈ ಮುಖಂಡರು

Congress MLA
Published on

ಹುಬ್ಬಳ್ಳಿ: ರಸ್ತೆ ಅಭಿವೃದ್ಧಿ ವಿಚಾರವಾಗಿ ಶಾಸಕಿಯ ಮುಂದೆಯೇ ಕಾಂಗ್ರೆಸ್​ ಮುಖಂಡರು ಕಿತ್ತಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದಿದೆ.

ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ‌ ಮುಂದೆಯೇ ಕೈ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಗುಡಗೇರಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡೋಕೆ ಕೈ ಶಾಸಕಿ ಕುಸುಮಾವತಿ ಬಂದಾಗ ಘಟನೆ ನಡೆದಿದೆ.

ನಾನು ಗುದ್ದಲಿ ಪೂಜೆ ಮಾಡೋಕೆ ಬಿಡಲ್ಲ, ಗುತ್ತಿಗೆದಾರರನ್ನು ಕರೆಸಿ ಎಂದು ಕೈ ಮುಖಂಡನೊಬ್ಬ ಧ್ವನಿ ಏರಿಸಿದಾಗ, ಬಾಯಿ ಜೋರು ಮಾಡಬೇಡಿ ಎಂದು ಮತ್ತೊಬ್ಬ ಮುಖಂಡ ವಾಗ್ವಾದಕ್ಕೆ ಇಳಿದ. ಮೂರು ತಿಂಗಳಿಂದ ಈ ರಸ್ತೆ ಯಾಕೆ ಬಂದ್ ಆಗಿತ್ತು, ನಮಗೆ ಉತ್ತರ ಹೇಳಿ ಎಂದು ಶಾಸಕರನ್ನು ಕೈ ಮುಖಂಡನೊಬ್ಬ ತರಾಟೆಗೆ ತೆಗೆದುಕೊಂಡ.

ಈ ವೇಳೆ ಪೋನ್ ಮಾಡಿ ಕೇಳ್ತೀನಿ ಎಂದ ಶಾಸಕಿ ಕುಸುಮಾವತಿ ಶಿವಳ್ಳಿ, ಒಂದು ಕ್ಷಣ ಪೇಚಿಗೆ ಸಿಲುಕಿದರು. ಇದೀಗ ಕೈ ನಾಯಕರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net