

ಸೊರಬ: ತಾಲೂಕಿನ ಕುಪ್ಪಗಡ್ಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ರಾಜಶೇಖರ್, ಉಪಾಧ್ಯಕ್ಷರಾಗಿ ಎಂ.ಬಸವಣ್ಯಪ್ಪ ಅವಿರೋಧವಾಗಿ ಆಯ್ಕೆಯಾದರು.
ಸಂಘದಲ್ಲಿ ಒಟ್ಟು 11 ನಿರ್ದೇಶಕರಿದ್ದು, ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಡಿ.8ರಂದು ನಡೆದಿದ್ದ ನಿರ್ದೇಶಕರ ಚುನಾವಣೆಯಲ್ಲಿ 11 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಧ್ಯಕ್ಷ ರಾಜಶೇಖರ್ ಮಾತನಾಡಿ, ರೈತರಿಗೆ ಸಕಾಲಕ್ಕೆ ಅವಶ್ಯವಿರುವ ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಪರಿಕರಗಳನ್ನು ಒದಗಿಸಲಾಗುವುದು ಎಂದರು.
ಮಾಜಿ ಅಧ್ಯಕ್ಷ ಸೋಮಪ್ಪ ಮಾತನಾಡಿ, ಎಲ್ಲ ನಿರ್ದೇಶಕರು ಸಂಘದ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು. ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಯೂ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಂಘವನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು.
ಚುನಾವಣಾ ಅಧಿಕಾರಿಯಾಗಿ ಕುಪ್ಪಗಡ್ಡೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಮೇಶ ಕುಲಕರ್ಣಿ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಚಂದ್ರಪ್ಪ, ಜಿ.ಎಚ್.ಪರಶುರಾಮ್, ಟಿ.ಕೃಷ್ಣಪ್ಪ, ಗಂಗಪ್ಪ, ಗುರುಪಾದ, ಐ.ಪ್ರಶಾಂತ್, ಲಲಿತಮ್ಮ, ನೀಲಮ್ಮ, ಲೋಕಮ್ಮ, ಪ್ರಮುಖರಾದ ಎಲ್.ಜಿ.ರಾಜಶೇಖರ್, ರಾಜಣ್ಣ, ವಿನಾಯಕಪ್ಪ, ವೀರೇಶಣ್ಣ, ಸದಾನಂದ ಗೌಡ, ಪರಶುರಾಮ, ಬಸವರಾಜ್, ಕ್ಷೇತ್ರ ಅಧಿಕಾರಿ ಕೃಷ್ಣ ನಾಯಕ್, ಸಿಇಒ ಪಿ.ನಿಂಗಪ್ಪ, ಸಿಬ್ಬಂದಿ ನರೇಂದ್ರಕುಮಾರ್, ಸುಶ್ಮಿತಾ, ಪ್ರವೀಣ್‌ಕುಮಾರ್, ಡಿ.ವಿ.ರವಿ ಇದ್ದರು.