

ಬೆಂಗಳೂರು: ಕಾಂಬೋಡಿಯಾ ದೇಶದ ಒಳಾಡಳಿತ ಸಚಿವಾಲಯದ ಅಧಿಕೃತ ಆಹ್ವಾನದ ಮೇರೆಗೆ ಫ್ನೊಮ್ ಪೆನ್ ನಗರಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಅಲ್ಲಿನ ಒಳಾಡಳಿತ ಸಚಿವಾಲಯದ ಕಾರ್ಯದರ್ಶಿ ಜನರಲ್ ಡಾ. ಕೆಮ್ ಚೀಟ್ ಅವರು ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಡಾ. ಕೆಮ್ ಚೀಟ್ ಅವರ ಸಲಹೆಗಾರ ಡಾ. ಎಸ್.ಸರ್ಜುದ್ದಿನ್ ಹಾಜರಿದ್ದರು.
ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಶಾಸಕ ಮಂಜುನಾಥ್, ಎಚ್.ಎಂ.ರಮೇಶ್ ಗೌಡ, ತೂಪಲ್ಲಿ ಚೌಡರೆಡ್ಡಿ ಮುಂತಾದವರು ಕೂಡ ಕುಮಾರಸ್ವಾಮಿ ಜತೆ ಇದ್ದಾರೆ.