ಮುಖಂಡರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಎಚ್‍ಡಿಕೆ ವಾಪಸ್ ಬೆಂಗಳೂರಿಗೆ…

kumaraswami
Published on

ಬೆಂಗಳೂರು: ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ, ತಮ್ಮ ಪಕ್ಷದ ಕೆಲ ಮುಖಂಡರೊಂದಿಗೆ ಮಲೇಷ್ಯಾಗೆ ಪ್ರವಾಸಕ್ಕೆಂದು ತೆರಳಿದ್ದರು. ನಿನ್ನೆ ಮಧ್ಯರಾತ್ರಿ ಸುಮಾರು 12.50 ಹೊತ್ತಿಗೆ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

ಮಲೇಷಿಯಾ ಏರ್ಲೈನ್ಸ್ ವಿಮಾನದಲ್ಲಿ ಕೌಲಾಲಂಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯರಾತ್ರಿ ಆಗಮಿಸಿದ ಎಚ್‍ಡಿಕೆ, ಎಂಟು ದಿನಗಳ ಹಿಂದೆ ಐದು ಜನ ಪಕ್ಷದ ಮುಖಂಡರ ಜೊತೆ ಪ್ರವಾಸ ಕೈಗೊಂಡಿದ್ದ ಎಚ್‍ಡಿಕೆ, ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಎಂಟು ದಿನಗಳ ಹಿಂದೆ ಮಾಜಿ ಶಾಸಕರು ಸೇರಿದಂತೆ ಐದು ಜನ ಪಕ್ಷದ ಮುಖಂಡರು ಜತೆ ಕುಮಾರಸ್ವಾಮಿ ಕಾಂಬೋಡಿಯಾ ಪ್ರವಾಸ ಕೈಗೊಂಡಿದ್ದರು. ಏರ್ಪೊಟ್ ನಲ್ಲಿ ಮಾತನಾಡಿದ ಎಚ್‍ಡಿಕೆ ಚೆಲುವರಾಯಸ್ವಾಮಿಗೆ ಟಾಂಗ್ ನೀಡುತ್ತಾ “ರಾಜ್ಯ ಪಾಲರಿಗೆ ಕೊಟ್ಟಿರೋ ಪತ್ರದ ವಿಚಾರದಲ್ಲೂ ನನ್ನ ಹೆಸರು ಕಾಂಗ್ರೆಸ್ ನವರು ಬಳಸಿಕೊಳ್ಳುತ್ತಾರೆ. ನನಗೆ ಅದರ ಸಂಬಂಧವಿಲ್ಲ"

"ವಿದೇಶದಲ್ಲೇ ಎಚ್‍ಡಿಕೆ ಇದ್ದು ಬಿಡಲಿ, ಎಲ್ಲಾ ವ್ಯವಸ್ಥೆ ಮಾಡ್ತೇವೆ ಅಂತಾ ಕೆಲವರು ಹೇಳಿದ್ದನ್ನು ಗಮನಿಸಿದ್ದೇನೆ. ನಾನು ವಿದೇಶಕ್ಕೆ ಯಾರಪ್ಪನ ದುಡ್ಡಿನಿಂದ ಹೋಗಿಲ್ಲ. ನಮಗೂ ವಿದೇಶಕ್ಕೆ ಖರ್ಚು ಮಾಡಿಕೊಂಡು ಹೋಗೋ ಯೊಗ್ಯತೆ ಇದೆ. ಯಾವುದೋ ಪಾಪದ ಹಣದಿಂದ ಹೋಗಬೇಕಾದ ಪರಿಸ್ಥಿತಿ ಇಲ್ಲ” ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಪ್ರವಾಸದ ಕಾರಣವನ್ನು ವಿವರಿಸಿದ ಎಚ್‍ಡಿ ಕುಮಾರಸ್ವಾಮಿ, “ನಾವು ಪ್ರವಾಸಕ್ಕೆ ತೆರಳಿದ್ದು ಕಾಂಬೋಡಿಯಾದ ಆಹ್ವಾನದ ಮೇರೆಗೆ. ಅಲ್ಲಿನ ಡೆವಲ್ಪೆಂಟ್ ಬಗ್ಗೆಯೂ ಹೆಚ್ಚು ತಿಳಿದುಕೊಂಡೆ. ದೇಶ ಸುತ್ತು ಕೋಶ ಹೋದು ಅಂತಾ ಹೇಳಿಲ್ವ? ಹಾಗೆ ದೇಶಗಳನ್ನು ಸುತ್ತಿ ಅಲ್ಲಿನ ಅಭಿವೃಧ್ಧಿ ಅದ್ಯಯನ ಮಾಡ್ತಿದ್ದೇವೆ” ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net