

2019 ಮುಕ್ತಾಯಗೊಳ್ಳುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ 2020ಕ್ಕೆ ಕಾಲಿಡುತ್ತಿದ್ದೇವೆ. ಹೊಸವರ್ಷದ ಸ್ವಾಗತಕ್ಕೆ ಜಗತ್ತೇ ಸಿದ್ಧವಾಗಿದೆ. ಎಲ್ಲಿ ನೋಡಿದರೂ ಪಟಾಕಿ, ಹಾಡು, ನೃತ್ಯದ್ದೇ ಕಾರುಬಾರು. ಒಬ್ಬೊಬ್ಬರು ಒಂದೊಂದು ರೀತಿ ಹೊಸವರ್ಷ ಆಚರಣೆಗೆ ಸಿದ್ಧರಾಗುತ್ತಿದ್ದಾರೆ.
ಈ ಮಧ್ಯೆ ಎಆರ್ಸಿ ಮ್ಯೂಸಿಕ್ ಕನ್ನಡ ಯೂಟ್ಯೂಬ್ ಚಾನಲ್ನಲ್ಲಿ ಗಾಯಕ ಕಿರಣ್ ರಾಜ್ ಅವರು ಹೊಸವರ್ಷ ಸ್ವಾಗತಕ್ಕೆ ವಿಭಿನ್ನವಾದ ರ‍್ಯಾಪ್ ಸಾಂಗ್ವೊಂದನ್ನು ಮಾಡಿ ಲಿರಿಕಲ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
'ಟು..ಟಟೂ...ಕೂಗಿ ಹೇಳು...ಹ್ಯಾಪಿ ನ್ಯೂ ಇಯರ್' ಎಂಬ ಸುಂದರ ಹಾಡಿಗೆ ಕಿರಣ್ ರಾಜ್ ಧ್ವನಿಯಾಗಿದ್ದಾರೆ. ಅವರೇ ಸಾಹಿತ್ಯವನ್ನೂ ಬರೆದಿದ್ದಾರೆ. ಧ್ರುವ ಕೇಶವ್ ಎಂಬುವರು ಸಂಗೀತ ನೀಡಿದ್ದಾರೆ.