

ರಾಣೆಬೆನ್ನೂರ: ಶಿವಮೊಗ್ಗ ಜಿಲ್ಲೆಯ ಶ್ರೀ ಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀ ಶಾರದಾಪೀಠದ 72ನೇ ಪೀಠಾಧಿಪತಿ ಅಭಿನವ ಶಂಕರ ಭಾರತೀ ಮಹಾ ಸ್ವಾಮೀಜಿ ಬುಧವಾರ ನಗರದ ಕೋಟೆ ಪ್ರದೇಶದಲ್ಲಿ ಭಕ್ತರ ಮನೆಗಳಿಗೆ ಭೇಟಿ ನೀಡಿ ಪಾದಪೂಜೆ ಸ್ವೀಕರಿಸಿದರು.
ನಂತರ ಶಂಕರ ಮಠದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ದತ್ತಾತ್ರೇಯ ನಾಡಿಗೇರ, ರವಿ ವರಗಿರಿ, ಶ್ರೀಪಾದ ಕುಲಕಣಿರ್, ಉಮೇಶ ವಿಶ್ವರೂಪ, ಶ್ರೀಧರ ವಿಶ್ವರೂಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.