ಹ್ಯಾಮರ್ ಥ್ರೋ: ಅನನ್ಯಾ ಪೂಜಾರಿ ನೂತನ ದಾಖಲೆ

18 Dwd 5A (Ananya Poojari)
Published on

ಧಾರವಾಡ: ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ 70ನೇ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ ಕೊನೆಯ ದಿನ ಮಹಿಳಾ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಧಾರವಾಡದ ಜೆಎಸ್‌ಎಸ್ ಎಸ್‌ಎಂಐ ಕಾಲೇಜಿನ ಅನನ್ಯಾ ಪೂಜಾರಿ ನೂತನ ದಾಖಲೆ ನಿರ್ಮಿಸಿದರು. ಅನನ್ಯಾ 41.27 ಮೀ. ಎಸೆದು 2005ರಲ್ಲಿ ಜಮಖಂಡಿಯಲ್ಲಿ ನಡೆದಿದ್ದ ಕೂಟದಲ್ಲಿ ಕಾರವಾರ ಶಿವಾಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವೈಶಾಲಿ ವಾರ್ಕರ್ ಅವರ ಹೆಸರಿನಲ್ಲಿದ್ದ 36.23 ಮೀ. ಹ್ಯಾಮರ್ ಥ್ರೋ ಸ್ಪರ್ಧೆಯ ದಾಖಲೆ ಮುರಿದರು. ಮೂಲತಃ ಶಿರಸಿಯ ರೈತ ದಂಪತಿಯ ಮಗಳಾದ ಅನನ್ಯಾ, ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಸ್ಪರ್ಧಿಸಿ ಪದಕ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net