

ರಾಣೆಬೆನ್ನೂರ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮಗೆ ನೀಡಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಶಿಕ್ಷಕರು ಹಾಗೂ ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಗೆ ಅಜಿರ್ ಸಲ್ಲಿಸಿದರು.
ಕಳೆದ 2020ರ ಚುನಾವಣೆಯಲ್ಲಿ ಸದರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯಥಿರ್ಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲದಾಗ, ಹಾಗೂ 28 ಕ್ಷೇತ್ರಗಳಲ್ಲಿ ಕೇವಲ 3-4 ಶಾಸಕರಿದ್ದ ಸಂದರ್ಭದಲ್ಲಿ ಪಕ್ಷಕ್ಕಾಗಿ ಅಭ್ಯಥಿರ್ಯಾಗಿ ತ್ಯಾಗ ಮಾಡಿದ್ದೇನೆ. ಈಗ ರಾಜಕೀಯ ಪರಿಸ್ಥಿತಿ ನಮ್ಮ ಪರವಾಗಿದ್ದು ಇಡೀ ಕ್ಷೇತ್ರದಲ್ಲಿ ಅತಿಹೆಚ್ಚು ಕಾಂಗ್ರೆಸ್ ಶಾಸಕರನ್ನು ಹೊಂದಿದ್ದು ನಿರುದ್ಯೋಗಿ ಪದವೀಧರರಿಗೆ, ಯುವನಿಧಿಯಲ್ಲಿ ಭತ್ಯೆ ನೀಡುತ್ತಿದ್ದು ಹಾಗೂ ಕ್ಷೇತ್ರದಲ್ಲಿ ನನ್ನ ಬಗ್ಗೆ ಮತದಾರರ ಅನುಕಂಪವಿದ್ದು ಎಲ್ಲ ರೀತಿಯಲ್ಲಿ ನಾನು ಗೆಲ್ಲುವ ಅಭ್ಯಥಿರ್ಯಾಗಿದ್ದೇನೆ. ಆದ್ದರಿಂದ ನನಗೆ ಪಕ್ಷ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಡಾ. ಕುಬೇರಪ್ಪ ಒತ್ತಾಯಿಸಿದ್ದಾರೆ.
ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ, ಆರ್. ಗೋಪಾಲರೆಡ್ಡಿ, ಎಸ್.ಎಚ್. ಹುಚಗೊಂಡರ, ಹಾಗೂ ಶಿಕ್ಷಕರ ಸಂಘಟನೆಯ ರಾಜ್ಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.