

ಸೊರಬ: ತಾಲೂಕಿನ ಕುಬಟೂರು ದೊಡ್ಡ ಕೆರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಿರಂತರ ಮಳೆ ಹಾಗೂ ಏತ ನೀರಾವರಿಯಿಂದ ಸ್ವಗ್ರಾಮ ಕುಬಟೂರಿನ ದೊಡ್ಡಕೆರೆಯು ತುಂಬಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ. ವರುಣನ ಕೃಪೆಯಿಂದ ಪ್ರತಿ ವರ್ಷ ರಾಜ್ಯಾದ್ಯಂತ ಉತ್ತಮ ಮಳೆ-ಬೆಳೆಯಾಗಲಿ. ಕೆರೆ-ಕಟ್ಟೆಗಳಿಗೆ ಜೀವಕಳೆ ತುಂಬಿ ರೈತರು, ಜನ-ಜಾನುವಾರಗಳಿಗೆ ಅನುಕೂಲವಾಗಬೇಕು ಎಂದರು. ಗ್ರಾಮದೇವಿ ಶ್ರೀ ದ್ಯಾಮವ್ವನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಅನಿತಾ ಮಧು ಬಂಗಾರಪ್ಪ, ಕೆರೆ ಸಮಿತಿ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಸೂರ್ಯ, ಕಾಂಗ್ರೆಸ್ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಬಗರ್‌ಹುಕುಂ ಕಮಿಟಿ ಅಧ್ಯಕ್ಷ ಎಂ.ಡಿ.ಶೇಖರ, ಎಚ್.ಗಣಪತಿ, ನಾಗರಾಜಗೌಡ, ನಾಗರಾಜ ಚಿಕ್ಕಸವಿ, ಎಲ್.ಜಿ.ರಾಜಶೇಖರ್, ಶಿವಲಿಂಗೇಗೌಡ, ಮಂಜುನಾಥ್, ಕೆ.ವಿ.ಗೌಡ, ಹುಚ್ಚಪ್ಪ ಮಂಡಗಳಲೆ, ಶ್ರೀಕಾಂತ್ ಸೇರಿದಂತೆ ಗ್ರಾಮಸ್ಥರು ಇದ್ದರು.