ಸಂಸ್ಕಾರದ ಔನ್ನತ್ಯಕ್ಕೆ ಭಾರತೀಯ ಕಲೆ ಅಡಿಗಲ್ಲು : ಕೆ.ಯಜ್ಞೇಶ್ ಆಚಾರ್ ಅಭಿಮತ

kss college
ಕಲಾವಿದ ಕೆ.ಯಜ್ಞೇಶ್ ಆಚಾರ್ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿದರು. ಪ್ರಮುಖರಾದ ಡಾ.ದಿನೇಶ್ ಪಿ.ಟಿ, ಲತಾ ಬಿ.ಟಿ, ವಿನ್ಯಾಸ್ ಹೊಸೋಳಿಕೆ, ಮೋಕ್ಷಿತಾ ಎಂ.ಎಂ ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಯುವ ಜನಾಂಗದಲ್ಲಿ ಸಂಸ್ಕೃತಿ, ಸಂಸ್ಕಾರಗಳು ಔನ್ನತ್ಯ ಹೊಂದಲು ಭಾರತೀಯ ಕಲೆಗಳು ಅಡಿಗಲ್ಲುಗಳಾಗಿವೆ. ಕಲೆಯ ಆಸ್ವಾದನೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ ಎಂದು ಕಲಾವಿದ ಕೆ.ಯಜ್ಞೇಶ್ ಆಚಾರ್ ಹೇಳಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತದ ಕೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಅಂತರ್ ತರಗತಿ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕಿ ಲತಾ ಬಿ.ಟಿ., ಸಾಂಸ್ಕೃತಿಕ ಸಂಘದ ಸಂಯೋಜಕ ವಿನ್ಯಾಸ್ ಹೊಸೊಳಿಕೆ, ಸಂಘದ ನಾಯಕಿ ಮೋಕ್ಷಿತಾ ಎಂ. ಹಾಜರಿದ್ದರು. ತರಗತಿವಾರು ಪ್ರತಿಭಾ ಪ್ರದರ್ಶನ ನಡೆಯಿತು.

ಸಮಾರೋಪ ಸಮಾರಂಭ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ಅಧ್ಯಕ್ಷತೆಯಲ್ಲಿ ನಡೆಯಿತು. ಹಳೇ ವಿದ್ಯಾರ್ಥಿನಿ ಶ್ರಾವ್ಯಾ ಎಂ.ಎಂ., ತೀರ್ಪುಗಾರರಾದ ಹರ್ಷಿತ್ ಪಡ್ರೆ, ಸುರೇಶ್ ರೈ, ಸಾಂಸ್ಕೃತಿಕ ತಂಡದ ಸಂಯೋಜಕ ವಿನ್ಯಾಸ್ ಹೊಸೊಳಿಕೆ, ಮತ್ತು ಸಾಂಸ್ಕೃತಿಕ ತಂಡದ ನಾಯಕಿ ಮೋಕ್ಷಿತಾ ಎಂ. ಹಾಜರಿದ್ದರು. ಸ್ಪರ್ಧೆಯಲ್ಲಿ ಪ್ರಥಮ ತೃತೀಯ ಬಿ.ಕಾಂ ಎ, ದ್ವಿತೀಯ ಸ್ಥಾನ ದ್ವಿತೀಯ ಬಿಎ ಹಾಗೂ ತೃತೀಯ ಪ್ರಥಮ ಬಿಕಾಂ ಎ ತಂಡ ಪಡೆದುಕೊಂಡಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net