VIDEO| 'ಅಂಬಾರಿ ಉತ್ಸವ' ಸ್ಲೀಪರ್ ಬಸ್​ಗಳ ಲೋಕಾರ್ಪಣೆ; ಏನಿದರ ವೈಶಿಷ್ಟ್ಯ? ಇಲ್ಲಿದೆ ಮಾಹಿತಿ…

KSRTC
Published on

ಬೆಂಗಳೂರು: ಪ್ರಯಾಣಿಕರಿಗೆ ಉತ್ಲೃಷ್ಟ ದರ್ಜೆಯ ಸೇವೆಯನ್ನು ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸದಾಗಿ ಐಷಾರಾಮಿ ಸೌಲಭ್ಯವುಳ್ಳ ವಿನೂತನ ಮಾದರಿಯ ಸ್ಲೀಪರ್​ ಬಸ್​ಗಳನ್ನು ಪರಿಚಯಿಸಿದೆ. ಮಹತ್ವಾಕಾಂಕ್ಷೆಯ ವೋಲ್ವೋ ಅಂಬಾರಿ ಬಸ್ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಾಂಕೇತಿಕ ಚಾಲನೆ ನೀಡಿದ್ದಾರೆ.

ವಿಧಾನಸೌಧದ ಮಹಾದ್ವಾರದ ಬಳಿ ವೋಲ್ವೋ ಮಲ್ಟಿ ಆಕ್ಸಲ್ ಬಸ್ ಗಳ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ‌ ಈ ವರ್ಷ ಒಂದು ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಅಂತಾರಾಜ್ಯ ಪ್ರಯಾಣಿಕರಿಗಾಗಿ ಸಿದ್ಧವಾದ ‘9600 ವೋಲ್ವೋ ಮಲ್ಟಿ-ಆಕ್ಸಲ್ ಸ್ಲೀಪರ್​’ ಬಸ್​ಗೆ “ಅಂಬಾರಿ ಉತ್ಸವ” ಎಂದು ನಾಮಕರಣ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್​ ಬಸ್​ಗಳಿಗಿಂತ ಅತ್ಯುತ್ತಮ ಸೌಕರ್ಯ ಹೊಂದಿರುವ ಬಸ್ ಇದಾಗಿದೆ. ಅಂಬಾರಿ ಉತ್ಸವ್- ಸೆಲೆಬ್ರೇಷನ್ ಆಫ್ ಜರ್ನಿ ಎಂದು ಎಂಬ ಘೋಷವಾಕ್ಯದಲ್ಲಿ ಕೆಎಸ್​ಆರ್​ಟಿಸಿ ಬಸ್ ಸೇವೆ ನೀಡಲಿದೆ.

1.70 ಕೋಟಿ ರೂ ವೆಚ್ಚ
ವ್ಯವಸ್ಥಿತ, ಸುಖಕರ ಪ್ರಯಾಣಕ್ಕೆ ಸುಸಜ್ಜಿತ ಸೌಲಭ್ಯವುಳ್ಳ ಪ್ರತಿ ಬಸ್ ಖರೀದಿಗೆ ಸಾರಿಗೆ ಸಂಸ್ಥೆಯು 1.70 ಕೋಟಿ ರೂ. ವೆಚ್ಚ ಮಾಡಿದೆ. ಮೊದಲ ಹಂತದಲ್ಲಿ 20 ಬಸ್ ಗಳನ್ನು ವೋಲ್ವೋ ಸಂಸ್ಥೆ ಪೂರೈಸಿದೆ. ಈ ವರ್ಷ ಒಟ್ಟು‌ 50 ಬಸ್ ಗಳನ್ನು ಖರೀದಿಸಲು ಸಂಸ್ಥೆ ತೀರ್ಮಾನಿಸಿದೆ.

ರೋಪಿಯನ್​ ಮಾದರಿ ಎಸಿ-ಸ್ಲೀಪರ್​​ ಬಸ್​ ಆಗಿದ್ದು, ಈ ಬಸ್​​​ಗಳು ಬೆಂಗಳೂರು ನಗರದಿಂದ ಮಂಗಳೂರು, ಕುಂದಾಪುರ, ಪುಣೆ, ಹೈದರಾಬಾದ್​, ಪಣಜಿ, ಸಿಕಂದ್ರಾಬಾದ್​, ಎರ್ನಾಕುಲಂ, ತ್ರಿಶೂರ್, ತಿರುವನಂಥಪುರಂಗೆ ಸಂಚರಿಸಲಿವೆ. ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಂದ ಈ ಬಸ್‌ಗಳು ಕಾರ್ಯನಿರ್ವಹಿಸಲಿವೆ.

ಅಂಬಾರಿ ಉತ್ಸವ್ ಬಸ್​ನ ವೈಶಿಷ್ಟ್ಯಗಳು

  • ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ 'ಅಂಬಾರಿ ಉತ್ಸವ' ಸಂಭ್ರಮದ ಪ್ರಯಾಣವೆಂಬ ಸಾರಿಗೆ ಸಂಸ್ಥೆ ಅಡಿಬರಹ ಗಮನಾರ್ಹ
  • ಮೇಲ್ಮೈಯು ಏರೋಡೈನಾಮಿಕ್ ಮೇರುಕೃತಿ, ವೇಗದ ಕಾರ್ಯಾಚರಣೆಯಲ್ಲಿ ಗಾಳಿಯ ಸೆಳೆತ ತಗ್ಗಿಸಲು ಪೂರಕ ಹಾಗೂ ಇಂಧನ ಉಳಿತಾಯ
  • 40 ಆಸನಗಳು, 2×1 ಸಂರಚನೆ. ಪ್ರಯಾಣಿಕರಿಗೆ ಕುಳಿತುಕೊಳ್ಳುವ, ಮಲಗುವ ಸ್ಥಾನದಲ್ಲಿ ಬೆಸ್ಟ್ ಇನ್ ಕ್ಲಾಸ್ ಹೆಡ್
  • ಕೆಳಗಿನ ಆಸನ 867 ಮಿ.ಮೀ., ಮೇಲಿನ ಆಸನ 850 ಮಿ.ಮೀ. ಹಾಗೂ ಹಿಂಬದಿ 790 ಮಿ.ಮೀ. ಕಂಪಾರ್ಟ್ ಮೆಂಟ್ ಆಸನಗಳು
  • ಪ್ರತಿ ಮೇಲಿನ ಆಸನದಲ್ಲಿ ಜಾರುವುದನ್ನು ತಡೆಯಲು ಪಿಯು ಫೋಮ್ ಲ್ಯಾಡರ್, ಕೆಳಗಿನ ಆಸನವನ್ನು ಘನಾಕೃತಿಯೊಂದಿಗೆ ಅಳವಡಿಸಿ ಬಲಪಡಿಸಲಾಗಿದೆ
  • ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸುಧಾರಿತ ಆಸನದ ಮೇಲೆ ಪ್ರೀಮಿಯಂ ರೆಕ್ಸಿನ್ ಹೊದಿಸಲಾಗಿದೆ
  • ಪರಿಸರ ಕಾಳಜಿ, ಸುರಕ್ಷತೆ, ಉತ್ತಮ ಗುಣಮಟ್ಟದ ಬಲಿಷ್ಠ ಸ್ಕ್ಯಾಂಡಿನೇವಿಯನ್ ವಿನ್ಯಾಸ
  • ಆಸನವು ಕ್ಯುಬಿಕಲ್ ಸಮಗ್ರ ಪರಿಕರ, ಓದಲು ಎರಡು ಲೈಟ್ ಗಳು, ಮೊಬೈಲ್ ಹೋಲ್ಡರ್, ಎರಡು ಯುಎಸ್ ಬಿ ಪೋರ್ಟ್
  • ವಿಶಾಲವಾದ ಗ್ಲಾಸ್ ಕಿಟಕಿಗಳ ವಿನ್ಯಾಸ, ವಿಹಂಗಮ ನೋಟದ ಆಸ್ವಾದ, ಆರಾಮದಾಯಕ ಪ್ರಯಾಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net