ಕಿಲ್ಲಿಂಗ್ ಲುಕ್​​ನಲ್ಲಿ ಕೃತಿ ಶೆಟ್ಟಿ; ಇಲ್ಲಿವೆ ಬೋಲ್ಡ್ ಫೋಟೋಗಳು..!

krithimix
Published on

ನಟಿ ಕೃತಿ ಶೆಟ್ಟಿ ಅವರು ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಉಪ್ಪೇನಾ’. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು.


ಆ ಬಳಿಕ ತೆರೆಗೆ ಬಂದ ‘ಶ್ಯಾಮ್ ಸಿಂಗ ರಾಯ್​’ ಕೂಡ ಹಿಟ್ ಆಯಿತು.

ನಾನಿ ನಟನೆಯ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತು. ‘ಶ್ಯಾಮ್ ಸಿಂಗ ರಾಯ್​ಗೂ’ ಸಕ್ಸಸ್ ಸಿನಿಮಾ ಎಂಬ ಲೇಬಲ್ ಸಿಕ್ಕಿತು. ಹೀಗಾಗಿ ಅವರಿಗೆ ಬೇಡಿಕೆ ಹೆಚ್ಚಿದೆ.


ಇತ್ತೀಚೆಗೆ ತೆರೆಗೆ ಬಂದ ‘ದಿ ವಾರಿಯರ್’ ಸಿನಿಮಾ ಸೋತಿದೆ. ಆದರೆ, ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಹಲವು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.


ಈಗ ಕೃತಿ ಶೆಟ್ಟಿ ಅವರು ಮಾಡರ್ನ್​​​ ಬ್ಲಾಕ್​ ಡ್ರೆಸ್​​​ನಲ್ಲಿ ಬೋಲ್ಡಾಗಿ ಪೋಸ್​​ ಕೊಟ್ಟ ಫೋಟೋಸ್​​​ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಫೋಟೋಗೆ ಸಾಕಷ್ಟು ಲೈಕ್ಸ್ ಬರುತ್ತಿದೆ.


ಸಿಂಪಲ್ ಆಗಿ ಕಾಣಿಸಿದ ನಟಿ ಅದೇ ಲುಕ್ನಲ್ಲಿ ಎಲ್ಲರ ಸ್ಟೇಟಸ್, ಸ್ಟೋರಿಯಲ್ಲಿ ಕಾಣಿಸಿಕೊಂಡಿದ್ದಾರೆ.


ಉಪ್ಪೇನಾ ಮೂಲಕ ವೈರಲ್ ಆಗ್ತಿರೋ ಈಕೆ ಕಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈಕೆ 8ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ.


ಈಕೆಯ ಮುಗ್ಧ ಸೌಂದರ್ಯದಿಂದಲೇ ಸದ್ಯ ವೈರಲ್ ಆಗಿದ್ದಾರೆ ಈ ನಟಿ.

ತಿ ಶೆಟ್ಟಿ ತಮ್ಮ ನಟನೆ ಮತ್ತು ಮುದ್ದಾದ ನೋಟದಿಂದ ಯುವ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಈ ನಾಯಕಿ ಇದ್ದಕ್ಕಿದ್ದಂತೆ ಜನಪ್ರಿಯರಾದರು. ಆ ನಂತರ ಸಾಲು ಸಾಲು ಸಿನಿಮಾ ಆಫರ್ ಗಳಿಂದ ಕೃತಿ ಹೆಸರು ಜನಪ್ರಿಯವಾಯಿತು.

ಕೃತಿ ಶೆಟ್ಟಿ ಕೂಡ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ನಟಿ ತನ್ನ ಲುಕ್ ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net