ಕೃಷ್ಣನ ಸಂದೇಶಗಳು ಅಮೂಲ್ಯ: ಸಾಯಿನಾಥಶ್ರೀ

bgs gurukula krishna janmastami
ಶಿವಮೊಗ್ಗ ಗುರುಪುರದ ಬಿಜಿಎಸ್ ಸಭಾಂಗಣದಲ್ಲಿ ಶ್ರೀ ಕೃಷ್ಣ ಮತ್ತು ರಾಧೆಯರ ವೇಷಭೂಷಣ ಸ್ಪರ್ಧೆಯನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಉದ್ಘಾಟಿಸಿದರು. ಎಂ.ಎ.ಹಿರಿಯಣ್ಣ ಹೆಗಡೆ, ಡಿ.ಜಿ.ಕುಮಾರಸ್ವಾಮಿ, ಎಸ್.ಎಚ್.ಸುರೇಶ್ ಇದ್ದರು.
Published on

ಶಿವಮೊಗ್ಗ: ದಶಾವತಾರಗಳಲ್ಲಿ ಶ್ರೀ ಕೃಷ್ಣನ ಅವತಾರವೂ ಒಂದು. ಭೂಲೋಕದಲ್ಲಿ ದುಷ್ಟರ ಶಿಕ್ಷಿಸಲು ಹಾಗೂ ಶಿಷ್ಟರನ್ನು ರಕ್ಷಿಸಲು ಅವತರಿಸಿದ ಶ್ರೀ ಕೃಷ್ಣನು ಮಹಾಭಾರತದ ಕುರುಕ್ಷೇತ್ರದ ಸಂದರ್ಭ ನೀಡಿದಂತಹ ಸಂದೇಶಗಳು ಅತ್ಯಂತ ಅಮೂಲ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.

ನಗರದ ಗುರುಪುರದ ಬಿಜಿಎಸ್ ಸಭಾಂಗಣದಲ್ಲಿ ಶ್ರೀ ಕೃಷ್ಣ ಮತ್ತು ರಾಧೆಯರ ವೇಷಭೂಷಣ ಸ್ಪರ್ಧೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಾಹ್ಯವಾಗಿ ಶ್ರೀ ಕೃಷ್ಣ ಹಾಗೂ ರಾಧೆಯರ ವೇಷಭೂಷಣವನ್ನು ಹಾಕಿದರೆ ಮಾತ್ರ ಏನೂ ಉಪಯೋಗವಿಲ್ಲ. ಆತನ ಸಂದೇಶಗಳನ್ನು ಮಕ್ಕಳಿಗೆ ತಿಳಿಸಿ ಅವರ ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ಈ ವೇಷಭೂಷಣಕ್ಕೆ ಮಹತ್ವ ಬರುತ್ತದೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮದ, ಮಾತ್ಸರ್ಯ ಹೆಚ್ಚಾಗಿದೆ. ಇವುಗಳನ್ನು ಹೋಗಲಾಡಿಸಲು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಇದರಿಂದ ನಮ್ಮಲ್ಲಿರುವ ನಕಾರಾತ್ಮಕ ಅಂಶಗಳು ದೂರವಾಗುತ್ತವೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಎಂ.ಎ.ಹಿರಿಯಣ್ಣ ಹೆಗಡೆ, ಡಿ.ಜಿ.ಕುಮಾರಸ್ವಾಮಿ, ಬಿಜಿಎಸ್ ಗುರುಕುಲ ಶಾಲೆ ಮತ್ತು ಕಾಲೇಜಿನ ಪ್ರಾಚಾರ್ಯ ಎಸ್.ಎಚ್.ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net