ಹೇ ಗಗನ ಪ್ರೀತಿಯ ಮಳೆ ಹರಿಸು: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಾಲ್ಕನೇ ಸಾಂಗ್ ಬಿಡುಗಡೆ

krishnam pranaya sakhi 2
Published on

ಬೆಂಗಳೂರು: ನಟ ಗಣೇಶ್ ಅಭಿನಯದ ಚಿತ್ರಗಳಲ್ಲಿ ಹಾಡುಗಳೇ ಹೈಲೈಟ್. ಬಹುತೇಕ ಸಿನಿಮಾಗಳು ಲಿರಿಕಲ್ ಹಿಟ್ ಆಗಿವೆ. ಇದೀಗ ಮತ್ತೊಂದು ಸೇರ್ಪಡೆ ‘ಕೃಷ್ಣಂ ಪ್ರಣಯ ಸಖಿ’. ಚಿತ್ರದ ಏಳು ಸಾಂಗ್‌ಗಳಲ್ಲಿ ನಾಲ್ಕು ಸಾಂಗ್ ಬಿಡುಗಡೆಯಾಗಿವೆ. ಈ ಹಿಂದೆ ‘ಮೈ ಮ್ಯಾರೇಜ್ ಈಸ್ ಫಿಕ್ಸಡ್’, ‘ಚಿನ್ನಮ್ಮ ಚಿನ್ನಮ್ಮ’ ಹಾಗೂ ‘ದ್ವಾಪರ ದಾಟುತ’ ಹಾಡುಗಳು ಹೆಚ್ಚು ವೈರಲ್ ಕಂಡಿದ್ದವು. ಇದೀಗ ಚಿತ್ರದ ನಾಲ್ಕನೇ ಸಾಂಗ್ ಬಿಡುಗಡೆಯಾಗಿದೆ.

‘ಹೇ ಗಗನ ಮಳೆಯಾ ಹರಿಸಿ, ತಿಳಿಸೇ ಬಿಡುವೆ ಆಸೆಯಾ’ ಎಂದು ಆರಂಭವಾಗುವ ಗೀತೆಯನ್ನು ಆನಂದ್ ಆಡಿಯೋದಲ್ಲಿ ಹಿರಿಯ ನಟ ರಾಮಕೃಷ್ಣ ಬಿಡುಗಡೆ ಮಾಡಿದರು. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಈ ಗೀತೆಯನ್ನು ಡಾ.ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದು, ಸೋನು ನಿಗಮ್ ಹಾಗೂ ಚಿನ್ಮಯಿ ಶ್ರೀಪಾದ್ ಧ್ವನಿಯಾಗಿದ್ದಾರೆ.

ನಾಯಕ ಗಣೇಶ್, ‘ನನ್ನ ಚಿತ್ರ ಜೀವನದ ಯಶಸ್ಸಿಗೆ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ. ಈ ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋದವರು ಖರೀದಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಪ್ರತಿಯೊಬ್ಬ ಗೀತರಚನೆಕಾರ, ಗಾಯಕರಿಗೂ ಧನ್ಯವಾದಗಳು’ ಎಂದರು. ಈ ಚಿತ್ರಕ್ಕೆ ‘ದಂಡುಪಾಳ್ಯ’ ಸರಣಿ ಖ್ಯಾತಿಯ ಶ್ರೀನಿವಾಸರಾಜು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಗಣೇಶ್‌ಗೆ ಕೇರಳ ಮೂಲದ ಮಾಳವಿಕಾ ನಾಯರ್ ಜೋಡಿಯಾಗಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಶ್ರೀನಿವಾಸ್‌ಮೂರ್ತಿ, ಶರಣ್ಯಾ ಶೆಟ್ಟಿ ತಾರಾಗಣದಲ್ಲಿದ್ದಾರೆ. ಇದೇ ತಿಂಗಳು 15ರಂದು ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net