ಲಕ್ಷಿ$್ಮ ವೆಂಕಟರಮಣಸ್ವಾಮಿಗೆ ಕೃಷ್ಣ್ಣಗಂಧೋತ್ಸವ

Published on

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ

ಪಟ್ಟಣದ ಸಂತೆಬೀದಿಯಲ್ಲಿರುವ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ರಥೋತ್ಸವ ಶ್ರಾವಣ ಮಾಸದ 4ನೇ ಶನಿವಾರ

ಸಕಲ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರ ಸಮೂಹದಲ್ಲಿ ನೆರವೇರಿತು.

ಮುಜರಾಯಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್​ ಸಂಯುಕ್ತಾಶ್ರಯದಲ್ಲಿ ಶನಿವಾರ ರಥೋತ್ಸವ ಅಂಗವಾಗಿ ಬೆಳಗ್ಗೆ ಅಭಿಷೇಕ, ಕೃಷ್ಣ್ಣಗಂಧೋತ್ಸವ ಮತ್ತು ರಥೋತ್ಸವಕ್ಕೆ ವಸಂತ ಸೇವೆ ನೆರವೇರಿದ ಬಳಿಕ ರಥದಲ್ಲಿ ದೇವರ ಉತ್ಸವ ಮೂರ್ತಿ ಕುಳಿರಿಸಿ ಹೋಮ&ಹವನ, ಪೂಜೆ ನೆರವೇರಿಸಲಾಯಿತು. ರಥೋತ್ಸವಕ್ಕೆ ಬಂದಿದ್ದ ಭಕ್ತರು ಗೋವಿಂದ ನಾಮ ಜಪಿಸುತ್ತಾ ರಥ ಎಳೆದು, ದೇವರ ದರ್ಶನ ಪಡೆದರು.

ಬ್ರಹ್ಮರಥ ಪಟ್ಟಣದ ಮಾರುತಿ ವೃತ್ತದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀಲಕ್ಷಿ$್ಮ ಆದಿನಾರಾಯಣಸ್ವಾಮಿ ದೇವಾಲಯದ ಮೂಲಕ ಮಾರುತಿ ವೃತ್ತ ತಲುಪಿತು.

ಭಕ್ತರು ರಥದ ಮೇಲೆ ಬಾಳೆಹಣ್ಣು, ಹೂವು ಎಸೆದು ಭಕ್ತಿ ಸಮರ್ಪಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ದೇವಾಲಯದ ಧರ್ಮದರ್ಶಿ ಶ್ರೀರಾಮಯ್ಯ, ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಪಪಂ ಅಧ್ಯಕ್ಷ ವಿಕಾಸ್​, ರಾಜಸ್ವ ನಿರೀಕ್ಷಕ ಕುಮಾರ ಸ್ವಾಮಿ, ಸಬ್​ ಇನ್​ಸ್ಪೆಕ್ಟರ್​ ರಮೇಶ್​, ಟ್ರಸ್ಟ್​ ಅಧ್ಯಕ್ಷ ಬಿ.ರಾಮಚಂದ್ರಪ್ಪ, ಕಾರ್ಯದರ್ಶಿ ಲಕ್ಷ್ಮೀಪತಿ, ಟ್ರಸ್ಟ್​ ನಿರ್ದೇಶಕರು, ಸದಸ್ಯರು, ಕಂದಾಯ ಇಲಾಖಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net