

ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವ ಆಂಧ್ರದ ಮೇಲೆ ಬಿದ್ದಿದ್ದು, ಕರಾವಳಿ ಜಿಲ್ಲೆಗಳು ತತ್ತರಿಸಿ ಹೋಗಿವೆ. ಮಳೆ ಅಬ್ಬರಕ್ಕೆ ಕೃಷ್ಣಾ ನದಿ ಉಕ್ಕಿಹರಿಯುತ್ತಿದೆ. ನದಿ ಅಂಚಿನ ಗ್ರಾಮಗಳು ಪ್ರವಾಹದ ನೀರಿನಲ್ಲಿ ಸಂಪೂರ್ಣ ಜಲಾವೃತವಾಗಿವೆ. ರಾಯಪುಡಿಯ ಪೆಡಲಂಕಾದಲ್ಲಿ ಸುಮಾರು 300 ಹಾಲು ಕೊಡುವ ಎಮ್ಮೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ.
ಇಡೀ ಗ್ರಾಮ ನಡುಗಡ್ಡೆಯಂತಾಗಿದ್ದು, 300 ಗ್ರಾಮಸ್ಥರನ್ನು ಸಮೀಪದ ಎನ್‌ಟಿಆರ್ ಜಿಲ್ಲೆ ಇಬ್ರಾಹಿಂಪಟ್ಟಣದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 70 ಮಂದಿ ಗ್ರಾಮದಲ್ಲೇ ಸಿಲುಕಿಕೊಂಡಿದ್ದಾರೆ. ಅವರೆಲ್ಲ ಮನೆ, ಮರಗಳ ಮೇಲೇರಿ ಸಹಾಯಕ್ಕಾಗಿ ವಿನಂತಿಸುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕೃಷ್ಣಾ ನದಿಯಲ್ಲಿ ಹೆಚ್ಚುತ್ತಿರುವ ಪ್ರವಾಹದಿಂದಾಗಿ ತುಳ್ಳೂರ್ಮ ಮಂಡಲದ ಹರಿಶ್ಚಂದ್ರಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ನದಿ ನೀರು ಗ್ರಾಮಕ್ಕೆ ನೀರು ನುಗ್ಗಿದೆ.