ಕೆ.ಆರ್ ಪುರಂ ಮಾಜಿ ತಹಶಿಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ! ಅಕ್ರಮ ಆಸ್ತಿ ಗಳಿಕೆ ಆರೋಪ

kr puram
Published on

ಬೆಂಗಳೂರು: ಲೋಕಾಯುಕ್ತಕ್ಕೆ ವಾಪಸ್ ಹಲ್ಲು ಬಂದ ನಂತರ ಒಂದೊಂದಾಗಿಯೇ ತಿಮಿಂಗಿಲಗಳಿಗೆ ಬಲೆ ಬೀಸುತ್ತಿದೆ. ಇದೀಗ ಕೆ.ಆರ್ ಪುರಂ ತಹಶೀಲ್ದಾರ್ ಆಗಿರುವ ಅಜಿತ್ ರೈ ಮನೆ ಸೇರಿದಂತೆ ಬೆಂಗಳೂರಿನ 10 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅಜಿತ್ ರೈ ಮೇಲೆ ಅಕ್ರಮ ಆಸ್ತಿಗಳಿಕೆಯ ಆರೋಪವಿದ್ದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.

ಬೆಂಗಳೂರಿನ ಒಟ್ಟು 10 ಕಡೆಗಳಲ್ಲಿ ದಾಳಿ ಮಾಡಲಾಗಿದ್ದು 20ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭ, ತಹಶಿಲ್ದಾರ್ ಮನೆಯಲ್ಲಿ ಹತ್ತು ಲಕ್ಷಕ್ಕು ಹೆಚ್ಚು ಹಣ ಸಿಕ್ಕಿದೆ ಎನ್ನಲಾಗಿದೆ. ಸದ್ಯಕ್ಕೆ ಪೊಲೀಸರು ಹಣ ಸೇರಿದಂತೆ ಅನೇಕ ದಾಖಲೆಗಳನ್ನು ಅಜಿತ್ ರೈ ಮನೆಯಲ್ಲಿ ಪರಿಶೀಲಿಸುತ್ತಿದ್ದಾರೆ. ಈ ನಡುವೆ ಅಜಿತ್ ರೈ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಫುಲ್ ಡ್ರಿಲ್ ಮಾಡುತ್ತಿದ್ದಾರೆ.

ಅಕ್ರಮ ಆರೋಪ ಇದೇ ಮೊದಲಲ್ಲ!

ಅಜಿತ್ ಕೆಲ ದಿನಗಳ ಹಿಂದೆ ಕೆ.ಆರ್ ಪುರ ದಿಂದ ವರ್ಗಾವಣೆ ಅಗಿದ್ದರು. ಈ ಹಿಂದೆ ಒಮ್ಮೆ ಅಮಾನತು ಕೂಡ ಆಗಿದ್ದರು ಅಜಿತ್ ರೈ. ಇವರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಬಿಲ್ಡರ್ ಹಾಗು ಕಂಪನಿಗಳಿಗೆ ಸಹಕಾರ ನೀಡಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಅಮಾನತು ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net