

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನದಿಂದ ಎಸ್.ಪಿ. ಷಡಕ್ಷರಿಸ್ವಾಮಿ ಅವರು ಇಂದು ನಿವೃತ್ತಿಯಾಗುತ್ತಿದ್ದಾರೆ.
ಮೂವತ್ತೇಳುವರೆ ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದ ಷಡಾಕ್ಷರಿಸ್ವಾಮಿ ಅವರು ಕೆಪಿಎಸ್ಸಿ ಸದಸ್ಯರಾಗಿ, ಎರಡು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದು ವಿಶೇಷ.
ಸರ್ಕಾರ ಶೀಘ್ರದಲ್ಲೇ ಕೆಪಿಎಸ್ಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಅಲ್ಲಿಯ ತನಕ ಹಿರಿಯ ಸದಸ್ಯರೊಬ್ಬರು ಪ್ರಭಾರಿ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ.