ಕೃಷಿ ಇಲಾಖೆ 945 ಹುದ್ದೆ ಭರ್ತಿಗೆ ಕೆಪಿಎಸ್ಸಿ ಅಧಿಸೂಚನೆ ಪ್ರಕಟ

KPSC
Published on

ಬೆಂಗಳೂರು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ -ಬಿ’ ವೃಂದದ 945 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಿದೆ.

ಕಲ್ಯಾಣ ಕರ್ನಾಟಕ ವಿಭಾಗದ 42 ಕೃಷಿ ಅಧಿಕಾರಿ ಮತ್ತು 231 ಸಹಾಯಕ ಕೃಷಿ ಅಧಿಕಾರಿ, ಇತರೆ ಜಿಲ್ಲೆಗಳ 86 ಕೃಷಿ ಅಧಿಕಾರಿ ಹಾಗೂ 586 ಸಹಾಯಕ ಕೃಷಿ ಅಧಿಕಾರಿ ಹುದ್ದೆ ಸೇರಿ ಒಟ್ಟು 945 ಹುದ್ದೆಗಳನ್ನು ತುಂಬಲಾಗುತ್ತಿದೆ. ಅಭ್ಯರ್ಥಿಗಳು ಅ.7ರಿಂದ ನ.7ರವರೆಗೆ ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕೃಷಿ ಅಧಿಕಾರಿ ಹುದ್ದೆಗೆ ಬಿಎಸ್ಸಿ ಕೃಷಿ ಅಥವಾ ಬಿಎಸ್ಸಿ ಆನರ್ಸ್ ಪದವಿ ಉತ್ತೀರ್ಣರಾಗಿರಬೇಕು. ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಬಿಎಸ್ಸಿ ಅಗ್ರಿ ಸೇರಿ ವಿವಿಧ 9 ಕೃಷಿ ಸಂಬಂಧಿ ವಿಷಯದಲ್ಲಿ ಪದವೀಧರರಾಗಿರಬೇಕು.

ಸಾಮಾನ್ಯ ವರ್ಗದವರಿಗೆ 38 ವರ್ಷ, ಇತರೆ ಹಿಂದುಳಿದ ವರ್ಗಕ್ಕೆ 41 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 43 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗಕ್ಕೆ 600 ರೂ., ಹಿಂದುಳಿದ ವರ್ಗಕ್ಕೆ 300 ರೂ., ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಹಾಗೂ ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net