

ಬೆಂಗಳೂರು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ಸಹಾಯಕ ನಿಯಂತ್ರಕರು ಗ್ರೂಪ್ ‘ಎ’ ಸಮೂಹದ 43 ಮತ್ತು ಲೆಕ್ಕಪರಿಶೋಧನಾಕಾರಿ ಗ್ರೂಪ್ ‘ಬಿ’ ಸಮೂಹದ 54 ಹುದ್ದೆಗಳಿಗೆ ಆ.11ರಂದು ನಡೆಯಲಿರುವ ಪೂರ್ವಭಾವಿ ಪರೀಕ್ಷೆಗೆ ನಿಗದಿಯಾಗಿದ್ದ ಮೈಸೂರು ಪರೀಕ್ಷಾ ಕೇಂದ್ರದಲ್ಲಿ ಬದಲಾವಣೆ ಮಾಡಲಾಗಿದೆ.
ಮೈಸೂರು ಜಿಲ್ಲಾ ಕೇಂದ್ರದಲ್ಲಿರುವ ಪರೀಕ್ಷಾ ಉಪಕೇಂದ್ರ ಸಂಕೇತ 03ರ ಮಹಾರಾಣಿ ಸರ್ಕಾರಿ ಪಿಯು ಕಾಲೇಜನ್ನು ಪರೀಕ್ಷೆ ಕೇಂದ್ರವಾಗಿ ಮಾಡಲಾಗಿತ್ತು. ಆದೇ ದಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಪರೀಕ್ಷೆಗಳಿಗೂ ಇದೇ ಕೇಂದ್ರಕ್ಕೆ ಕಾಲೇಜಿನ ಮುಖ್ಯಸ್ಥರು ಒಪ್ಪಿಗೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರವನ್ನು ಮರಿಮಲ್ಲಪ್ಪ ಪಿಯು ಕಾಲೇಜಿಗೆ ಪರೀಕ್ಷಾ ಉಪ ಕೇಂದ್ರವನ್ನು ಹಂಚಿಕೆ ಮಾಡಲಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಈಗಾಗಲೇ ಮಹಾರಾಣಿ ಪಿಯು ಕಾಲೇಜಿನ ಉಪಕೆಂದ್ರಕ್ಕೆ ಹಂಚಿಕೆಯಾಗಿ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳು ಬದಲಾವಣೆಯಾಗಿರುವ ಮರಿಮಲ್ಲಪ್ಪ ಕೇಂದ್ರದ ಪ್ರವೇಶ ಪತ್ರವನ್ನು ಮತ್ತೊಮ್ಮೆ ಆಯೋಗದ ಅಂತರ್ಜಾಲದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸ್ಪಷ್ಟಪಡಿಸಲಾಗಿದೆ.