ಕೋವಿಡ್​ ಲಾಕ್​ಡೌನ್​ ಹಿನ್ನೆಲೆ; ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳ ಮುಂದೂಡಿಕೆ

kpsc
Published on

ಬೆಂಗಳೂರು: ಕರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್​ಸಿ) ವಿವಿಧ ವೃಂದದ ಹುದ್ದೆಗಳಿಗೆ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಮುಂದೂಡಿದೆ.

ಈ ವಿಷಯವನ್ನು ತಿಳಿಸಿರುವ ಕೆಪಿಎಸ್​ಸಿ ಕಾರ್ಯದರ್ಶಿ ಸಿ. ಸತ್ಯವತಿ, ಈ ಪರೀಕ್ಷೆಗಳು ಮೇ ಹಾಗೂ ಜೂನ್​ನಲ್ಲಿ ನಿಗದಿಯಾಗಿದ್ದವು. ಲಾಕ್​ಡೌನ್​ ಸಂಪೂರ್ಣ ತೆರವಾದ ಬಳಿಕ ಪರೀಕ್ಷೆಗಳ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಮುಂದೂಡಿಕೆಯಾಗಿರುವ ಪರೀಕ್ಷೆಗಳು

* ವಿವಿಧ ಇಲಾಖೆಗಳ ಸಹಾಯಕರು/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳು

* ಗೆಜೆಟೆಡ್ ಪ್ರೊಬೆಷನರ್​ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 106 ಹುದ್ದೆಗಳು

* ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಮೂಹ ಎ ವೃಂದದ ಸಹಾಯಕ ನಿಯಂತ್ರಕರು 54 ಹುದ್ದೆಗಳು.

* ವಿವಿಧ ಇಲಾಖೆಗಳಲ್ಲಿನ ಸಹಾಯಕ/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net