

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬರೋಬ್ಬರಿ 40 ವರ್ಷಗಳ ಬಳಿಕ ಭಾನುವಾರ ಕಾವೇರಿ ನದಿಯಲ್ಲಿ ಈಜಾಡಿ ಕೆಲ ಸಮಯ ಕಳೆದಿದ್ದಾರೆ.
ಭಾನುವಾರ ಸೂರ್ಯ ಗ್ರಹಣ ಇತ್ತು. ಅಂದು ಸಂಜೆ ಕಾವೇರಿ ನದಿಯಲ್ಲಿ ಡಿಕೆಶಿ ಈಜಾಡುತ್ತ ಕಾಲ ಕಳೆದಿದ್ದಾರೆ. ಗ್ರಹಣ ಮುಗಿದ ನಂತರ ಕುಟುಂಬಸ್ಥರೊಂದಿಗೆ ಅಲ್ಲಿನ ಈಶ್ವರ ದೇವಸ್ಥಾನದಲ್ಲಿ ಪೂಜೆಯನ್ನೂ ಸಲ್ಲಿಸಿದ್ದಾರೆ. ನದಿಯಲ್ಲಿ ಈಜುತ್ತಿರುವ ಮತ್ತು ಕುಟುಂಬಸ್ಥರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ವೇಳೆ ಶಾಲಾ- ಕಾಲೇಜು ದಿನ ಮತ್ತು ತಂದೆಯೊಂದಿಗೆ ಕಾಲ ಕಳೆದಿದ್ದ ಕ್ಷಣಗಳನ್ನೂ ಮೆಲುಕು ಹಾಕಿದ್ದಾರೆ. ಅವರೇ ಬರೆದುಕೊಂಡ ನೆನಪುಗಳು ಇಲ್ಲಿದೆ ನೋಡಿ.
ಇದನ್ನೂ ಓದಿರಿ ರಾಜವಂಶಸ್ಥ ಯದುವೀರ್ ವಿರುದ್ಧವೇ ತಿರುಗಿಬಿದ್ದ ಸಂಘಟನೆಗಳು!