ಶಾಕ್ ನೀಡಿದ ಬ್ಲಾಕ್ ಘಟಕಗಳ ವಿಸರ್ಜಿಸಿದ ಕೆಪಿಸಿಸಿ

KPCC1
Published on

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯು ಕೊನೆ ಹಂತದಲ್ಲಿ ಸೋಲಿಗೆ ಕಾರಣವಾದ ಅಂಶವನ್ನು ಹುಡುಕಾಡುತ್ತಿರುವ ಕಾಂಗ್ರೆಸ್, ಮಹದೇವಪುರದಲ್ಲಿ ಹಿನ್ನೆಡೆಯಾದ ಸಂಗತಿ ಪತ್ತೆ ಮಾಡಿದೆ.
ಇದೇ ಕಾರಣಕ್ಕೆ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಿದರಹಳ್ಳಿ, ವರ್ತೂರು, ಹೂಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ಕೆಪಿಸಿಸಿ ವಿಸರ್ಜಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಸೂಚನೆಯನ್ನು ಪಾಲಿಸಿದೆಯಲ್ಲದೇ, ಈ 4 ಬ್ಲಾಕ್ ಸಮಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೂತ್ ಸಮಿತಿ, ವಾರ್ಡ್ ಸಮಿತಿ, ಪಂಚಾಯಿತಿ ಸಮಿತಿ, ಮುಂಚೂಣಿ ಘಟಕ, ಸೆಲ್ ಹಾಗೂ ವಿಭಾಗಗಳ ಸಮಿತಿಯನ್ನು ಸಹ ವಿಸರ್ಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net