

ವಿಜಯನಗರ: ಐತಿಹಾಸಿಕ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ಅದ್ಧೂರಿಯಾಗಿ ಜರುಗಿದೆ. ಎಂದಿನಂತೆ ಈ ವರ್ಷವೂ ದೂರದೂರಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕೊಟ್ಟೂರೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಜಿಲ್ಲೆಯ ಕೊಟ್ಟೂರು ಪಟ್ಟಣದ ತೇರು ಬೀದಿಯಲ್ಲಿ ನಡೆದ ಅದ್ದೂರಿ ರಥೋತ್ಸವದ ವೇಳೆ ರಥ ಎಳೆಯುತ್ತಿದ್ದಂತೆಯೇ ಭಕ್ತರು ಬಾಳೆ ಹಣ್ಣು ಎಸೆದು ಹರಕೆ ತೀರಿಸಿಕೊಂಡಿದ್ದಾರೆ. ಭಕ್ತರು ಶ್ರೀ ಗುರು ಕೊಟ್ಟೂರೇಶ್ವರನ ದೇಗುಲದಿಂದ ಪಲ್ಲಕ್ಕಿ ಹೊತ್ತು ತಂದರು. ಮೊದಲ ಪೂಜೆ ದಲಿತರ ಮನೆಯಿಂದ ಜರಗುತ್ತದೆ.
ಕೊಟ್ಟೂರೇಶ್ವರ ದೇಗುಲದ ಆಡಳಿತ ಮಂಡಳಿ ಪಲ್ಲಕ್ಕಿಯನ್ನು ರಥೋತ್ಸವಕ್ಕೆ ತಂದು ಪಲ್ಲಕ್ಕಿ ಪ್ರತಿಷ್ಠಾಪನೆ ಮಾಡಿದರು. ಕೊಟ್ಟೂರೇಶ್ವರನಿಗೆ ಹರಕೆ ತೀರಿಸಲು ಪಾದಯಾತ್ರೆ ಮೂಲಕ ನಿನ್ನೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಬಳ್ಳಾರಿ, ವಿಜಯನಗರ, ಹಾವೇರಿ, ಕೊಪ್ಪಳ, ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ 3 ಲಕ್ಷಕ್ಕೂ ಅಧಿಕ ಭಕ್ತರು ಕೊಟ್ಟೂರೇಶ್ವರನ ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ.