ಮೊತ್ತಹಳ್ಳಿಯಲ್ಲಿ ಕೋತಿಗೆ ತಿಥಿ ಕಾರ್ಯ: ಗ್ರಾಮಸ್ಥರಿಂದ ಅನ್ನದಾಸೋಹ

2
Published on

ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿ ಮೊತ್ತಹಳ್ಳಿ ಗ್ರಾಮದಲ್ಲಿ ಸೋಮವಾರ ಕೋತಿಯ 11ನೇ ದಿನದ ತಿಥಿ ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಮಾಡಲಾಯಿತು.

ಕೋತಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಮನುಷ್ಯರು ಸತ್ತ ನಂತರ ಮಾಡುವಂತೆಯೇ ತಿಥಿ ಕಾರ್ಯವನ್ನು ಮಾಡಿದರು. ಹಲವು ಬಗೆಬಗೆಯ ತಿಂಡಿ ಪದಾರ್ಥವನ್ನಿಟ್ಟು ಕೋತಿಯ ಆತ್ಮಕ್ಕೆ ಶಾಂತಿ ಕೋರಿದರು. ಮಾತ್ರವಲ್ಲದೆ ಆಗಮಿಸಿದ ಎಲ್ಲರಿಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಮುಖಂಡರಾದ ಸಚಿನ್, ಸಿದ್ದರಾಜು, ಚಾಮೇಗೌಡ, ವಿನಯ್‌ಕುಮಾರ್, ಮನು, ರಾಜೇಶ್, ನಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net