ರಾಸುಗಳಿಗೆ ಮೇವಿಲ್ಲದೆ ಕೋರಮಂಗಲ ಗೋಶಾಲೆಯಲ್ಲಿ ಸಂಕಷ್ಟ | ನಿತ್ಯ 18 ಟನ್ ಅಗತ್ಯ

Koramangala Goshala 9 APR 20
Published on

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಕೋರಮಂಗಲದ ಅಖಿಲ ಕರ್ನಾಟಕ ಪ್ರಾಣಿ ದಯಾಸಂಘದಲ್ಲಿರುವ ಸಾವಿರಕ್ಕೂ ಅಧಿಕ ರಾಸುಗಳಿಗೆ ಮೇವಿಲ್ಲದಂತಾಗಿದೆ.

ಸಾರ್ವಜನಿಕರ ದೇಣಿಗೆಯಿಂದ ನಿರ್ವಹಣೆ ಮಾಡಲಾಗುತ್ತಿರುವ ಈ ಗೋಶಾಲೆಯಲ್ಲಿ ಎತ್ತು, ಕರು, ಗೂಳಿ, ಕುದುರೆ, ಮೇಕೆ ಹೀಗೆ ವಿವಿಧ ಪ್ರಾಣಿಗಳು ಮತ್ತು ವಿವಿಧ ತಳಿಯ 1,100ಕ್ಕೂ ಅಧಿಕ ಹಸುಗಳಿಗೆ ಪ್ರತಿನಿತ್ಯ 11 ಟನ್ ಹಸಿ ಮೇವು, 7 ಟನ್ ಒಣಮೇವು ಬೇಕಾಗುತ್ತದೆ. ಇಲ್ಲ ಬರುವ 4ರಿಂದ 5 ಸಾವಿರ ಪಾರಿವಾಳಗಳಿಗೆ ನಿತ್ಯ 600 ಕೆ.ಜಿ. ಕಾಳು ಅಗತ್ಯವಿದೆ. ಆದರೆ, ನಿತ್ಯ 18 ಟನ್ ಮೇವು ನೀಡಬೇಕಾದ ಜಾಗದಲ್ಲಿ 3ರಿಂದ 4 ಟನ್ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ಕರ್ನಾಟಕ ಅನಿಮಲ್ ವೆಲ್​ಫೇರ್ ಬೋರ್ಡ್ ಉಪಾಧ್ಯಕ್ಷರು ಗೋಶಾಲೆಗೆ ಭೇಟಿ ನೀಡಿದ್ದಾಗ ಮೇವಿನ ಕೊರತೆ ಬಗ್ಗೆ ಗಮನಕ್ಕೆ ತರಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೇವಿನ ಸಮಸ್ಯೆ ಕುರಿತು ಈಗಾಗಲೇ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಮುಖ್ಯಮಂತ್ರಿಗಳಿಗೂ ವಿಪತ್ತು ನಿರ್ವಹಣೆ ನಿಧಿಯಿಂದ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಗೋಶಾಲೆ ಮುಖ್ಯಸ್ಥ ಸುನೀಲ್ ದುಗಾರ್ ಹೇಳಿದ್ದಾರೆ.

ಲಿಖಿತ ರೂಪದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಸರ್ಕಾರದ ಆದೇಶ ಮತ್ತು ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

| ಡಾ. ಪರಮೇಶ್ವರ್ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ

ಪ್ರತಿನಿತ್ಯ ಹಸುಗಳಿಗೆ ಮೇವು, ಹಿಂಡಿ, ಬೂಸಾ, ವೈದ್ಯಕೀಯ ಖರ್ಚು ಮತ್ತು ಗೋಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 80 ಜನ ಕಾರ್ವಿುಕರಿಗೆ ಸಂಬಳ ಸೇರಿ ತಿಂಗಳಿಗೆ 35ರಿಂದ 40 ಲಕ್ಷ ರೂ. ಖರ್ಚು ಬರುತ್ತದೆ. ಲಾಕ್ ಡೌನ್​ನಿಂದಾಗಿ ದೇಣಿಗೆ ನಿಂತಿದೆ.

| ಸುನೀಲ್ ದುಗಾರ್ ಗೋಶಾಲೆ ಮುಖ್ಯಸ್ಥ

ವಿಜಯ್ ಮಡಿವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net