ಬೇರೆ ಬೇರೆ ವಿವಾಹವಾಗಿದ್ದರೂ ಸಂಬಂಧ ಮುಂದುವರೆಸಿದ್ದ ಪ್ರೇಮಿಗಳಿಬ್ಬರು ಸಾವಿಗೆ ಶರಣು

Lovers pohto
Published on

ಕೊಪ್ಪಳ: ಬೇರೆ ಬೇರೆ ವಿವಾಹವಾಗಿದ್ದರೂ ಸಂಬಂಧ ಮುಂದುವರೆಸಿದ್ದ ಪ್ರೇಮಿಗಳಿಬ್ಬರು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ.

ಪೀರಸಾಬ್ ನದಾಫ್ (೩೩), ಶಾರದಾ ಶರಣಪ್ಪ ಬಸಾಪೂರ (೩೦) ಮೃತ ದುರ್ದೈವಿಗಳು. ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ವಿಷ ಸೇವೆನ ಮಾಡಿ ಸಾವನ್ನಪ್ಪಿದ್ದಾರೆ.

ನಡೆದಿದ್ದೇನು?: ಪೀರಸಾಬ್ ನದಾಫ್, ಶಾರದಾ ಶರಣಪ್ಪ ಬಸಾಪೂರ ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿತ್ತು. ಆದರೂ ಇಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದರು, ಈ ಸುದ್ದಿ ಇಡೀ ಊರಿಗೆ ಗೊತ್ತಾಗಿತ್ತು. ಪೀರಸಾಬನ ಪತ್ನಿಗೆ ಅನೈತಿಕ ಸಂಬಂಧದ ಬಗ್ಗೆ ಗೊತ್ತಾಗಿ, ಶಾರದಾ ಬಳಿ ಹೋಗಿ ನನ್ನ ಗಂಡನ ಸಹವಾಸ ಬೀಡು ಅಂತ ಆಗಾಗ ಜಗಳ ಮಾಡುತ್ತಿದ್ದಳು. ದೂರ ಆಗುವುದಾದರೇ ಇಬ್ಬರು ಜಗತ್ತಿನಿಂದ ದೂರ ಆಗುತ್ತೇವೆ ಅಂದಿದ್ದರು. ಈ ಕುರಿತಾಗಿ ಊರ ಹಿರಿಯರು ಇಬ್ಬರಿಗೂ ತಿಳುವಳಿಕೆ ಹೇಳಿದ್ದರು. ಆದರೆ ಇಬ್ಬರು ಹಿರಿಯರ ಮಾತು ಕೇಳಿರಲಿಲ್ಲ.

ವಿವಾಹಿತ ಪ್ರೇಮಿಗಳಿಬ್ಬರಿಗೆ ಈ ವಿಚಾರವಾಗಿ ಬೇಸರವಾಗಿತ್ತು. ಒಬ್ಬರನೊಬ್ಬರು ಬಿಟ್ಟು ಇರಲಾರೆವು. ಸಾವು ಒಂದೇ ನಮಗೆ ದಾರಿ ಎಂದು ನಿರ್ಧಾರ ಮಾಡಿದ್ದಾರೆ. ಬೆಳಗಿನ ಜಾವ ಜಮೀನಿಗೆ ತೆರಳಿ ಇಬ್ಬರು ಒಟ್ಟಾಗಿ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಹನಮಸಾಗರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಾಹಿತ ಪ್ರೇಮಿಗಳಿಬ್ಬರ ಆತ್ಮಹತ್ಯೆ ಪ್ರಕರಣ ಹನಮಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net