ಸಹಕಾರ ರಂಗದಿಂದ ಪ್ರಗತಿ ಸಾಧ್ಯ: ಜಿಲ್ಲಾ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅಭಿಮತ

20112022 kukanour sahakara saptaha
Published on

ಕೊಪ್ಪಳ: ಮೂರು ಅಂಶಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಸಹಕಾರ ರಂಗದಿಂದ ಅದ್ಭುತ ಪ್ರಗತಿ ಕಾಣಬಹುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ರಾಷ್ಟ್ರದಾದ್ಯಂತ ಸಹಕಾರ ವ್ಯವಸ್ಥೆಗೆ ಹೊಸ ಆಯಾಮ ದೊರೆಯುವ ಸೂಚನೆಗಳು ಕಂಡುಬರುತ್ತಿವೆ. ಅಲ್ಲದೆ ಸಹಕಾರ ಕ್ಷೇತ್ರ ಆರ್ಥಿಕತೆಯ ಬೆಳವಣಿಗೆಯಲ್ಲಿ ಮತ್ತಷ್ಟು ಗಣನೀಯ ಕೊಡುಗೆ ನೀಡಲು ಸಹಕಾರ ಸಂಘಗಳ ಆರ್ಥಿಕ ಸೇರ್ಪಡೆ, ಪ್ರಾಕೃಪಸ ಸಂಘಗಳ ಡಿಜಿಟಲೀಕರಣ, ದತ್ತಾಂಶ ಬಲಪಡಿಸಿಕೊಂಡರೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ ಮಾತನಾಡಿ, ಯುವಕರನ್ನು ಸೆಳೆಯಲು ಜಿಲ್ಲಾ ಸಹಕಾರ ಯೂನಿಯನ್ ರಾಜ್ಯದಲ್ಲಿ ವಿವಿಧ ತರಬೇತಿ ನೀಡುವ ಮೂಲಕ ಸಹಕಾರ ಚಳವಳಿ ಬಲಪಡಿಸಲು ಶ್ರಮಿಸುತ್ತಿದೆ ಎಂದರು.

ಯೂನಿಯನ್ ನಿರ್ದೇಶಕ ತೋಟಪ್ಪ ಕಾಮನೂರು ಮಾತನಾಡಿದರು. ಸಂಘದ ನಿರ್ದೇಶಕರಾದ ಶಕುಂತಲಾ ಹುಡೇಜಾಲಿ, ಅಶೋಕರಾಜ ಪಾಟೀಲ್, ಎನ್.ಸಿ.ಗೌಡರ, ಸಿಇಒ ಅಕ್ಷಯ್ ಕುಮಾರ, ವ್ಯವಸ್ಥಾಪಕ ರಾಜಶೇಖರ ಹೊಸಮನಿ, ಚೈತ್ರಾ ಹುಡೇಜಾಲಿ, ಗವಿಸಿದ್ದೇಶ ಹಾಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net