ಕೇಂದ್ರ ಸರ್ಕಾರದ ಐಟಿ ನಿಯಮ ಪಾಲಿಸಿ, ಮಾದರಿಯಾದ 'ಕೂ'

koo
Published on

ನವದೆಹಲಿ : ಭಾರತೀಯ ಮೈಕ್ರೊಬ್ಲಾಗಿಂಗ್ ಮತ್ತು ಸೋಷಿಯಲ್ ನೆಟ್​ವರ್ಕಿಂಗ್ ಆ್ಯಪ್​ ಆದ 'ಕೂ', ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಐಟಿ ನಿಯಮಗಳ ಪ್ರಕಾರ ಕಂಪ್ಲೈಯನ್ಸ್​ ರಿಪೋರ್ಟ್​ ಸಲ್ಲಿಸಿರುವ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಹೊರಹೊಮ್ಮಿದೆ.

ಹೊಸ ಐಟಿ ನಿಯಮಗಳ ಪ್ರಕಾರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಂದು ಸಾಮಾಜಿಕ ಮಾಧ್ಯಮ ವೇದಿಕೆಯೂ ಭಾರತದಲ್ಲೇ ವಾಸಿಸುವ ಗ್ರೀವೆನ್ಸ್​ ಆಫೀಸರ್​ಗಳನ್ನು ನೇಮಕ ಮಾಡಬೇಕು ಮತ್ತು ಬಳಕೆದಾರರ ದೂರುದುಮ್ಮಾನಗಳನ್ನು ಇತ್ಯರ್ಥಪಡಿಸಿ ವರದಿ ನೀಡಬೇಕು ಎನ್ನಲಾಗಿದೆ.

ಕೂ ಆ್ಯಪ್​ ಈ ನಿಯಮಗಳನ್ನು ಪಾಲಿಸಿದ್ದು, ಜೂನ್​ 2021 ರ ವರದಿಯನ್ನು ಸಲ್ಲಿಸಿದೆ. ಜೂನ್​ ತಿಂಗಳಲ್ಲಿ 5,502 ಕೂ(ಸಂದೇಶ)ಗಳ ಬಗ್ಗೆ ಸಮುದಾಯದಿಂದ ದೂರುಗಳು ಬಂದಿವೆ. ಅವುಗಳಲ್ಲಿ ಶೇ. 22.7 ರಷ್ಟು ಅಂದರೆ 1,253 ಕೂಗಳನ್ನು ತೆಗೆದುಹಾಕಲಾಗಿದೆ. ಉಳಿದ 4,249 ಕೂಗಳ ವಿಚಾರದಲ್ಲಿ ಇತರ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿಯ ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net