

ಹಾವೇರಿ: ವಿದ್ಯಾಥಿರ್ಗಳು ವಿವಿಧ ಸಂ ಸಂಸ್ಥೆಗಳ ವತಿಯಿಂದ ಆಯೋಜಿಸುವ ಕಾರ್ಯಾಗಾರಗಳ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಬಿಇಒ ಮೌನೇಶ ಬಡಿಗೇರ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್ ವತಿಯಿಂದ ತಾಲೂಕಿನ ಹೊಸರಿತ್ತಿಯ ಜಿವಿಎಚ್ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾಥಿರ್ಗಳ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಜಿ.ಪಿ. ಕೋರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ನ ಉಪ ಪ್ರಾಚಾಯೆರ್ ಗೀತಾ ಬಿ.ಕೆ. ವೃತ್ತಿ ಶಿಕ್ಷಣದ ಕುರಿತು ಮಾರ್ಗದರ್ಶನ ನೀಡಿದರು. ಗಣಿತ ಮತ್ತು ವಿಜ್ಞಾನ ವಿಷಯ ಪರಿಣಿತ ವಸಂತ ಮೆಳ್ಳಳ್ಳಿ ಮತ್ತು ವೀರೇಶ ಗಡ್ಡದೇವರಮಠ ಹೆಚ್ಚಿನ ಅಂಕ ಗಳಿಸುವ ಕುರಿತು ಉಪನ್ಯಾಸ ನೀಡಿದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಎಂ.ಐ. ದೊಡ್ಡಮನಿ, ಉಪನ್ಯಾಸಕರಾದ ದಾದಾಪೀರ ಗುತ್ತಲ, ಡಿ.ಕೆ. ಕಮ್ಮಾರ, ಸವಿತಾ ಜಿ.ಎಸ್. ಹಾಗೂ ಸಿಬ್ಬಂದಿ ಇದ್ದರು.