

ಕೊಳ್ಳೇಗಾಲ: ಕರ್ನಾಟಕ ರಾಜ್ಯ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್ ಚಾಮರಾಜನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪಟ್ಟಣದ ದೇವಾಂಗಪೇಟೆ ನಿವಾಸಿ ಎನ್.ಗಿರೀಶ್ ಬಾಬು ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಅಮೆಚೂರ್ ಬಾಡಿಬಿಲ್ಡರ್ಸ್ ಅಸೋಸಿಯೇಷನ್(ಕೆಎಬಿಬಿಎ) ಪ್ರಧಾನ ಕಾರ್ಯದರ್ಶಿ ಆರ್. ರಘುನಂದನ್ ಅಧಿಕೃತವಾಗಿ ಆದೇಶ ಹೊರಡಿಸಿ ಎನ್.ಗಿರೀಶ್ ಬಾಬು ಅವರನ್ನು ನೇಮಕ ಮಾಡಿದ್ದಾರೆ.