ನೆರೆಮನೆಯಾಕೆ ಕಾಣದಿದ್ದನ್ನು ನೋಡಿ ಆಕೆಯ ಮನೆಹೊಕ್ಕಿ ನೋಡಿದ ಸ್ಥಳೀಯರಿಗೆ ಕಾದಿತ್ತು ಭಾರಿ ಶಾಕ್​!

Police
Published on

ಕೋಲ್ಕತ: ಪತ್ನಿಯ ಶವದೊಟ್ಟಿಗೆ ವ್ಯಕ್ತಿಯೊಬ್ಬ ಮೂರು ದಿನ ಕಳೆದಿರುವ ಆತಂಕಕಾರಿ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಚಕ್ಡಾ ಏರಿಯಾದಲ್ಲಿ ನಡೆದಿದ್ದು, ಸ್ಥಳೀಯರು ಮನೆಹೊಕ್ಕಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಲಿವರ್​ ಸಮಸ್ಯೆಯಿಂದ ಮೃತಪಟ್ಟ ಭಾರತಿ ಚಂದ(50) ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆ ದೇಹ ಸ್ಥಿತಿಯನ್ನು ನೋಡಿದರೆ ಮೃತಪಟ್ಟು ಕೆಲವು ದಿನಗಳಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಸೋಮವಾರ ಕೊನೆಯ ಬಾರಿಗೆ ಭಾರತಿ ಚಂದಾ ಅವರನ್ನು ನೆರೆಯವರು ನೋಡಿದರಂತೆ. ಇದರಿಂದ ಅನುಮಾನಗೊಂಡು ಆಕೆಯ ಪತಿ ಬಚ್ಚು ಚಂದರನ್ನು ಪ್ರಶ್ನಿಸಿದ್ದಾರೆ. ಆತ ಏನನ್ನು ಮಾತನಾಡದಿದ್ದಾಗ ಮನೆಯೊಳಗೆ ಹೋಗಿ ಪರಿಶೀಲಿಸಿದಾಗ ಭಾರತಿ ಚಂದ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಬಚ್ಚು ಚಂದ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net