ಹೆಣ್ಣುಮಕ್ಕಳು ಲೈಂಗಿಕ ಪ್ರಚೋದನೆಗೆ ಒಳಗಾಗಬಾರದು: ಕೋಲ್ಕತಾ ಹೈಕೋರ್ಟ್​

high court
Published on

ಕೋಲ್ಕತಾ: ಹದಿಹರೆಯದ ಹುಡುಗರು ಮತ್ತು ಹುಡುಗಿಯರು ತಮ್ಮಷ್ಟಕ್ಕೆ ತಾವೇ ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಅನ್ಯ ಲಿಂಗದವರ ಘನತೆ ಮತ್ತು ದೈಹಿಕ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಕೋಲ್ಕತಾ ಹೈಕೋರ್ಟ್ ಸೂಚಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧ ಹದಿಹರೆಯದವರ ಮನವಿಯನ್ನು ಆಲಿಸಿದ ಕೋರ್ಟ್​ ಎರಡು ನಿಮಿಷದ ಸಂತೋಷಕ್ಕೆ ಮಣಿದು ಇನ್ನೊಬ್ಬರ ಜೀವನದಲ್ಲಿ ಆಟವಾಡುವುದು ಸರಿಯಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಏನಿದು ಪ್ರಕರಣ: ಹದಿಹರೆಯದ ಯುಕನೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಸಂಗಾತಿಯೊಂದಿಗೆ ಲೈಂಗಿಕತೆ ಹೊಂದಿದ್ದಕ್ಕಾಗಿ ಕಳೆದ ವರ್ಷ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪಕ್ಕಕ್ಕಿರಿಸಿ ಆಪರಾಧಿ ಬಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿತು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ನೀಡಿದ ಸಮ್ಮತಿಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಅವರೊಂದಿಗೆ ನಡೆಸುವ ಸಂಭೋಗವು ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಅತ್ಯಾಚಾರಕ್ಕೆ ಸಮಾನವಾಗಿರುತ್ತದೆ. ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಸ್ ಮತ್ತು ಪಾರ್ಥ ಸಾರಥಿ ಸೇನ್ ಅವರ ದ್ವಿಸದಸ್ಯ ಪೀಠವು ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿತು. ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಶಾಲೆಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣಕ್ಕೆ ಕರೆ ನೀಡಿತು.

ವಿಚಾರಣೆ ವೇಳೆ ಬಾಲಕಿ ತನ್ನ ಸ್ವಂತ ಇಚ್ಛೆಯಂತೆ ಸಂಬಂಧ ಹೊಂದಿದ್ದು, ಬಳಿಕ ಆತನನ್ನು ಮದುವೆಯಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದಳು. ಆದರೆ ಭಾರತದಲ್ಲಿ ಲೈಂಗಿಕತೆಗೆ ಒಪ್ಪಿಗೆಯ ವಯಸ್ಸು 18 ಆಗಿದೆ ಮತ್ತು ಇವರ ಸಂಬಂಧವು ಅಪರಾಧವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಹದಿಹರೆಯದವರಲ್ಲಿ ಲೈಂಗಿಕತೆಯು ಸಾಮಾನ್ಯವಾಗಿದೆ ಆದರೆ ಅಂತಹ ಪ್ರಚೋದನೆಯ ವ್ಯಕ್ತಿಯ ಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ, ಇದಕ್ಕೆ ಬಹುಶಃ ಪುರುಷ ಅಥವಾ ಮಹಿಳೆ ಹೊರತಾಗಿಲ್ಲ ಎಂದು ಪೀಠ ಹೇಳಿದೆ.

ಹೆಣ್ಣು ಮಕ್ಕಳು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಬೇಕು."ತನ್ನ ದೇಹದ ಸಮಗ್ರತೆಯ ಹಕ್ಕನ್ನು" ರಕ್ಷಿಸುವುದು ಹೆಣ್ಣುಮಕ್ಕಳ ಕರ್ತವ್ಯ. ಎರಡು ನಿಮಿಷದ ಸಂತೋಷಕ್ಕೆ ಮಣಿಯಬಾರದು ಎಂದು ನ್ಯಾಯಾಲಯವು ಸಲಹೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net