ಮರು ಬಿಡುಗಡೆಯಾಗುತ್ತೆ ಹೃತಿಕ್​ ರೋಷನ್​ ಅಭಿನಯದ 20 ವರ್ಷ ಹಳೆ ಸಿನಿಮಾ!

jaadu
Published on

ಮುಂಬೈ: ಸಮಯ ಹೇಗೆ ಹಾರುತ್ತದೆ ಗೊತ್ತಾಗುವುದಿಲ್ಲ. ಹೃತಿಕ್ ರೋಷನ್ ಅಭಿನಯದ ಸಕೈ-ಫೈ ಚಿತ್ರ 'ಕೋಯಿ ಮಿಲ್ ಗಯಾ' ಆಗಸ್ಟ್ 8 ರಂದು 20 ವರ್ಷಗಳನ್ನು ಪೂರೈಸಲಿದೆ.

ಇಲ್ಲಿಯವರೆಗೆ, ಚಿತ್ರವನ್ನು ಅದರ ವಿಶಿಷ್ಟ ಪರಿಕಲ್ಪನೆಗಾಗಿ ನೆನೆಸಿಕೊಳ್ಳಲಾಗುತ್ತದೆ. ನಿರ್ದೇಶಕ ರಾಕೇಶ್ ರೋಷನ್ ಇಪ್ಪತ್ತು ವರ್ಷಗಳ ಹಿಂದೆ, ಅವರು ಚಿತ್ರದಲ್ಲಿ ಹೃತಿಕ್ ಪಾತ್ರದ ರೋಹಿತ್ ಮೆಹ್ತಾನ ಜೀವನವನ್ನು ಬದಲಿಸಿದ ಪ್ರೀತಿಯ ಅನ್ಯಲೋಕದ "ಜಾದೂ" ಅನ್ನು ನಮಗೆ ಪರಿಚಯಿಸಿದ್ದರು.

Koi Mil Gaya 2003 Wallpapers | Koi Mil Gaya 2003 HD Images | Photos  hrithik-roshan-290 - Bollywood Hungama

ಈ ಚಿತ್ರದಲ್ಲಿ ಹೃತಿಕ್ ಮಾನಸಿಕ ಅಸ್ವಸ್ಥ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದು, ಜಾದೂ ಪ್ರವೇಶದ ನಂತರ ಯಾವ ರೀತಿಯಲ್ಲಿ ಮಾನಸಿಕ ಅಸ್ವಸ್ಥನ ಜೀವನ ಬದಲಾಗುತ್ತದೆ ಎಂದು ತೋರಿಸಲಾಗಿದೆ. ಇದೀಗ ಈ ಸಿನಿಮಾದ ನಿರ್ಮಾಪಕರು, ಸಿನಿಮಾದ ಅಭಿಮಾನಿಗಳಿಗಾಗಿ ವಿಶೇಷ ಸುದ್ದಿಯನ್ನು ಹೊರತಂದಿದ್ದು, 'ಕೋಯಿ ಮಿಲ್ ಗಯಾ' ಚಿತ್ರದ 20ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 4ರಂದು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.

17 years of 'Koi Mil Gaya': 5 reasons we miss seeing Jadoo

ಈ ಅಪ್​ಡೇಟ್​ಅನ್ನು ಹಂಚಿಕೊಂಡ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಬುಧವಾರ, "'ಕೋಯಿ ಮಿಲ್ ಗಯಾ' ಚಿತ್ರ ತನ್ನ 20 ನೇ ವಾರ್ಷಿಕೋತ್ಸವವನ್ನು 30 ನಗರಗಳಲ್ಲಿ ಮರು-ಬಿಡುಗಡೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದೆ. 20 ವರ್ಷಗಳ ಹಿಂದೆ ಜನರು ಹೆಚ್ಚಾಗಿ ಇಷ್ಟಪಟ್ಟ ಮತ್ತು ಭಾರೀ ಯಶಸ್ಸನ್ನು ಕಂಡ ಚಲನಚಿತ್ರವು 4 ಆಗಸ್ಟ್ 2023 ರಿಂದ #ಭಾರತದ 30 ನಗರಗಳಾದ್ಯಂತ #PVR #INOX ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net