

ಬಾಲಿವುಡ್ ನ ಖ್ಯಾತ ಟಾಕ್ ಶೋ ‘ಕಾಫಿ ವಿತ್ ಕರಣ್’ ಇದೀಗ ಸೀಸನ್ 8 ಕಂಡಿದೆ. ಸದ್ಯದಲ್ಲೇ ಸೀಸನ್ 8 ಕೂಡ ಶುರುವಾಗಲಿದೆ. ಮೊದಲ ಎಪಿಸೋಡ್ ನಲ್ಲಿ ಕರಣ್ ಜೋಹಾರ್ ಜೊತೆ ಮಾತನಾಡಲಿದ್ದಾರಂತೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ. ಕರಣ್ ಮಾತುಗಳು ಅಂದರೆ ಅದಕ್ಕೆ ಸೆನ್ಸಾರ್ ಇರುವುದಿಲ್ಲ.
ರಣವೀರ್ ಕೂಡ ಅಷ್ಟೇ ಬೋಲ್ಡ್ ಆಗಿ ಮಾತನಾಡುವಂತಹ ನಟ. ಹಾಗಾಗಿ ಮೊದಲನೇ ಎಪಿಸೋಡ್ ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲ ಸಾಕಷ್ಟು ಮಂದಿಯಲ್ಲಿತ್ತು. ಇದೀಗ ಮೊದಲ ಎಪಿಸೋಡ್ನ ಪ್ರೋಮೊ ಬಿಡುಗಡೆಯಾಗಿದ್ದು, ಮಿಲಿಯನ್ ಗಟ್ಟೆ ವೀಕ್ಷಣೆ ಗಳಿಸಿದೆ.
ಬ್ಲಾಕ್ ಸ್ಮೋಕಿಂಕ್ ಎಫೆಕ್ಟ್ನ ಡ್ರೆಸ್ನಲ್ಲಿ ಈ ಜೋಡಿ ಸಖತ್ ಆಗಿ ಕಾಣಿಸಿಕೊಂಡಿದೆ. ದಂಪತಿಗಳು ತಮ್ಮ ಮದುವೆಯ ವೀಡಿಯೊವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದು, ಸದ್ಯ ಈ ವಿಡಿಯೋಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಎಪಿಸೋಡ್ನಲ್ಲಿ ಈ ಜೋಡಿಯ ಮದುವೆಯ ವಿಡಿಯೋದ ತುಣುಕನ್ನ ಶೇರ್ ಮಾಡಲಾಗಿದ್ದು, ಇಂದು ಅದು ಪ್ರಸಾರವಾಗಲಿದೆ.
ಇದೀಗ ಮತ್ತೊಂದು ಪ್ರಶ್ಎನಯನ್ನ ಶೋನಲ್ಲಿ ಕರಣ್ ಜೋಹರ್ ದೀಪಿಕಾಗೆ ಕೇಳಿದ್ದಾರೆ. ನಿಮ್ಮ ಕೆಮಿಸ್ಟ್ರಿ ಯಾರ ಜತೆಗೆ ಚೆನ್ನಾಗಿ ವರ್ಕೌಟ್ ಆಗುತ್ತೆ ಎಂದು ಪ್ರಶ್ನಿಸಿದ್ದು, ಅದಕ್ಕೆ ದೀಪಿಕಾ ಉತ್ತರಿಸಿದ್ದಾರೆ. ಅದಾದ ನಂತರದಲ್ಲಿ ರಣ್ವೀರ್ ಹೃತಿಕ್ ರೋಶನ್ನಂತೆ ನಟಿಸಿದ್ದಾರೆ.
ಸದ್ಯ ರಣ್ವೀರ್ ಹೃತಿಕ್ ರೋಶನ್ ಅನುಕರಿಸಿರುವ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಒಟ್ಟಾರೆಯಾಗುಇ ಈ ಜೋಡಿಯನ್ನ ಮೊದಲ ಎಪಿಸೋಡ್ಗೆ ಕರೆಸಿರೋದು ತುಂಬಾ ಖುಷಿ ಕೊಟ್ಟಿದೆ. ಇವರಿಬ್ಬರೂ ಎಲ್ಲಢೇ ಹೋದ್ರೂ ಅಲ್ಲೊಂದು ಎನರ್ಜಿ ಇರುತ್ತೆ ಅಂತಾ ದೀಪ್ವೀರ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಕರಣ್ ಜೋಹರ್ ನಿರೂಪಣೆಯ ಕಾರ್ಯಕ್ರಮ ಈಗಾಗಲೆ ಪವರ್ ಕಪಲ್ ಎಂಟ್ರಿಯೊಂದಿಗೆ ಭರ್ಜರಿ ಓಪನಿಂಗ್ವ ಪಡೆದುಕೊಂಡಿದೆ. ಈ ಹೊಸ ಸೀಸನ್‌ನಲ್ಲಿ ನ್ಯಾಷನಲ್ ಸ್ಟಾರ್ ಯಶ್- ರಿಷಬ್ ಶೆಟ್ಟಿ ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.